ಮಡಿಕೇರಿ, ಡಿ. ೨೫: ಕ್ರೆöÊಸ್ತ ಸಮುದಾಯದವರ ಪ್ರಮುಖ ಆಚರಣೆಯಾಗಿರುವ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಜಿಲ್ಲೆಯಾದ್ಯಂತ ಮನೆ ಮಾಡಿದೆ. ಕಳೆದ ರಾತ್ರಿಯಿಂದಲೇ ಈ ಕುರಿತಾದ ಕಾರ್ಯಕ್ರಮಗಳು ಆರಂಭಗೊAಡಿದ್ದು, ಸಂಪ್ರದಾಯದAತೆ ತಾ. ೨೫ ರಂದು ಕ್ರೆöÊಸ್ತ ಬಾಂಧವರು ಹಬ್ಬಾಚರಿಸಿದರು.ಜಿಲ್ಲೆಯ ಎಲ್ಲಾ ಚರ್ಚ್ಗಳು ಅಲಂಕೃತ ಗೊಂಡಿದ್ದು, ಬಾಲಯೇಸುವಿನ ಆರಾಧನೆ, ಆಡಂಬರ ಬಲಿ ಪೂಜೆ, ಸಾಮೂಹಿಕ ಪ್ರಾರ್ಥನೆಗಳು ಎಲ್ಲೆಡೆ ನಡೆಯಿತು. ಕಳೆದ ರಾತ್ರಿ ಗೋದಲಿಯಲ್ಲಿ ಬಾಲಯೇಸುವನ್ನು ಮಲಗಿಸುವ ಮೂಲಕ ಕಾರ್ಯಕ್ರಮ ಜರುಗಿತು. ಪ್ರಸಕ್ತ ವರ್ಷ ಕೊರೊನಾ ಕಾರಣದಿಂದಾಗಿ ಹೆಚ್ಚಿನ ಸಂಭ್ರಮ ಇಲ್ಲದೆ, ಸರಳ ಕಾರ್ಯಕ್ರಮವಾದರೂ, ಎಲ್ಲೆಡೆ ಶ್ರದ್ಧಾ - ಭಕ್ತಿಯೊಂದಿಗೆ ಏಸುವಿನ ಆರಾಧನೆ ನಡೆಯಿತು.ಜಿಲ್ಲೆಯಲ್ಲಿ ಸುಮಾರು ೧೯ ರೋಮನ್ ಕ್ಯಾಥೊಲಿಕ್ ಚರ್ಚ್ಗಳು ಹಾಗೂ ೭ಕ್ಕೂ ಅಧಿಕ ಸೌತ್ ಇಂಡಿಯನ್ (ಸಿಎಸ್‌ಐ) ಚರ್ಚ್ಗಳಿದ್ದು, ಎಲ್ಲೆಡೆ ಸಾಮೂಹಿಕ ಪ್ರಾರ್ಥನೆ, ಶುಭ ಹಾರೈಕೆಗಳು ವಿನಿಮಯಗೊಂಡವು.ಮಡಿಕೇರಿಯ ಸೆಂಟ್‌ಮೈಕೆಲ್, ಕುಶಾಲನಗರದ ಸಂತ ಸಬಾಸ್ಟಿನ್, ಸುಂಟಿಕೊಪ್ಪದ ಸಂತ ಅಂತೋಣಿ, ವೀರಾಜಪೇಟೆ ಸಂತ ಅನ್ನಮ್ಮ, ಸೋಮವಾರ ಪೇಟೆಯ ಒಎಲ್‌ವಿ, ಪೊನ್ನಂಪೇಟೆಯ ಸೆಂಟ್ ಆಂಟೋನಿ, ಚೆಟ್ಟಳ್ಳಿಯ ಸಂತ ಸಬಾಸ್ಟಿನ್, ಸಿದ್ದಾಪುರದ ಸಂತ ಜೋಸೆಫ್, ಪಾಲಿಬೆಟ್ಟ, ಮಾದಾಪುರ, ಶನಿವಾರಸಂತೆ, ಗೌಡಳ್ಳಿ
ಮತ್ತಿತರ ಕಡೆಗಳಲ್ಲಿ ಸಾಮೂಹಿಕ ಪ್ರಾರ್ಥನೆ,
ಪೂಜೆ, ಪುನಸ್ಕಾರಗಳು ಜರುಗಿದವು.
ಮನೆ - ಮನೆಗಳಲ್ಲಿಯೂ ಹಬ್ಬದ ಸಂಭ್ರಮ ದೊಂದಿಗೆ ಪರಸ್ಪರ ಶುಭಾಶಯಗಳ ವಿನಿಮಯ ನಡೆಯಿತು. ಮಡಿಕೇರಿಯ ಸಂತಮೈಕೆಲರ ಚರ್ಚ್ನಲ್ಲಿ ಧರ್ಮಗುರು ಜಾರ್ಜ್ ದೀಪಕ್ ಹಾಗೂ ಸಿಎಸ್‌ಐ ಶಾಂತಿ ಚರ್ಚ್ನಲ್ಲಿ ಧರ್ಮಗುರು ಅಮೃತ್‌ರಾಜ್ ನೇತೃತ್ವದಲ್ಲಿ ವಿಧಿ - ವಿಧಾನಗಳು ಜರುಗಿದವು.
ದೊಂದಿಗೆ ಪರಸ್ಪರ ಶುಭಾಶಯಗಳ ವಿನಿಮಯ ನಡೆಯಿತು. ಮಡಿಕೇರಿಯ ಸಂತಮೈಕೆಲರ ಚರ್ಚ್ನಲ್ಲಿ ಧರ್ಮಗುರು ಜಾರ್ಜ್ ದೀಪಕ್ ಹಾಗೂ ಸಿಎಸ್‌ಐ ಶಾಂತಿ ಚರ್ಚ್ನಲ್ಲಿ ಧರ್ಮಗುರು ಅಮೃತ್‌ರಾಜ್ ನೇತೃತ್ವದಲ್ಲಿ ವಿಧಿ - ವಿಧಾನಗಳು ಜರುಗಿದವು.
ಗೋಪಾಲಪುರ
ಮುಳ್ಳೂರು: ಸÀಮೀಪದ ಗೋಪಾಲಪುರದಲ್ಲಿರುವ ಕ್ಯಾಥೋಲಿಕ್ ಅಂತ ಅಂಥೋಣಿ ಚರ್ಚ್ನಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಕ್ರೆöÊಸ್ತ ಬಾಂಧವರು ಕೊರೊನಾ ಹಿನ್ನೆಲೆ ಸರಕಾರದ ಮಾರ್ಗಸೂಚಿ ನಿಯಮದಂತೆ ಸಾಂಪ್ರದಾಯಿಕವಾಗಿ ಆಚರಿಸಿದರು. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಚರ್ಚ್ ದೀಪಾಲಂಕಾರದಿAದ ಕಂಗೊಳಿಸುತ್ತಿತ್ತು. ಗುರುವಾರ ರಾತ್ರಿ ೧೦-೩೦ ಗಂಟೆಯಿAದ ಕ್ರೆöÊಸ್ತ ಬಾಂಧವರು ಚರ್ಚಿನಲ್ಲಿ ಕ್ರಿಸ್ಮಸ್‌ಗೀತಾ ಭಜನೆಯೊಂದಿಗೆ ಕ್ರಿಸ್‌ಮಸ್ ಹಬ್ಬ ಆಚರಣೆ ಪ್ರಾರಂಭಿಸಿದರು.
ಸಂಪ್ರದಾಯದAತೆ ರಾತ್ರಿ ೧೧ ಗಂಟೆಗೆ ಬಲಿಪೂಜೆ ಮಾಡಲಾಯಿತು. ಚರ್ಚ್ನಲ್ಲಿ ಬಾಲಯೇಸುವಿನ ಪ್ರತಿಮೆಯನ್ನು ಸುಂದರವಾಗಿ ಅಲಂಕರಿಸಿ ಪಕ್ಕದಲ್ಲಿ ನಿರ್ಮಿಸಿದ್ದ ಗೋದಲಿಯೊಳಗೆ ಇಟ್ಟು ಆರಾಧಿಸಿದರು. ಫಾದರ್ ಜಾಕಬ್ ಕೊಳನೂರು ಅವರು ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಕ್ರೆöÊಸ್ತ ಬಾಂಧವರಿಗೆ ಧಾರ್ಮಿಕ ಉಪನ್ಯಾಸ ನೀಡಿದ ನಂತರ ಹಬ್ಬದ ಶುಭಾಶಯ ವಿನಿಮಯ ಸಲ್ಲಿಸಿದರು. ಈ ವರ್ಷ ಕೊರೊನಾ ಸೋಂಕು ಹಿನ್ನೆಲೆ ಜನರು ಸಂಕಷ್ಟ ಪಡುತ್ತಿರುವ ಹಿನ್ನೆಲೆ ಇನ್ನು ಮುಂದೆ ಜನರಿಗೆ ಕೊರೊನಾ ಕಾಯಿಲೆ ಹರಡದಂತೆ ಸಾಮೂಹಿಕವಾಗಿ ಪ್ರಾರ್ಥನೆ ಮಾಡಿದರು. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಕೇಕ್ ಹಂಚುವ ಮೂಲಕ ಹಬ್ಬವನ್ನು ಆಚರಿಸಿದರು. ಬೀಟೆಕಟ್ಟೆ, ಗೋಪಾಲಪುರ, ಶನಿವಾರಸಂತೆ, ಕಳಲೆ ಮತ್ತು ಹೊಸೂರು ಕಡೆಯಿಂದ ಕ್ರೆöÊಸ್ತ ಬಾಂಧವರು ಪಾಲ್ಗೊಂಡಿದ್ದರು.ನಾಪೋಕ್ಲು: ಇಲ್ಲಿನ ಮೇರಿ ಮಾತೆ ದೇವಾಲಯದಲ್ಲಿ ಕ್ರೆöÊಸ್ತ ಭಾಂಧವರು ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿAದ ಆಚರಿಸಿದರು. ದೇವಾಲಯದಲ್ಲಿ ಗುರುವಾರ ರಾತ್ರಿ ಏಸುವಿಗೆ ವಿಶೇಷಪೂಜೆ ಸಲ್ಲಿಸಿದ ನಂತರ ಸಾಮೂಹಿಕ ಪ್ರಾರ್ಥನೆ ಜರುಗಿತು. ಧರ್ಮಗುರು ಜ್ಞಾನಪ್ರಕಾಶ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆದು ಹಬ್ಬದ ವಿಶೇಷತೆಯ ಬಗ್ಗೆ ಮಾತನಾಡಿದರು.
ದೇವಾಲಯದಲ್ಲಿ ಶುಕ್ರವಾರ ಕ್ರೆöÊಸ್ತ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಆಡಳಿತ ಮಂಡಳಿ ಮತ್ತು ಕ್ರೆöÊಸ್ತ ಬಾಂಧವರು ಪಾಲ್ಗೊಂಡಿದ್ದರು.ನಡೆಯಿತು. ಸಂತ ಮೈಕಲರ ದೇವಾಲಯದ ಧರ್ಮಗುರು ಫಾ.ದೀಪಕ್ ಹಾಗೂ ಸಹಾಯಕ ಗುರುಗಳಾದ ಫಾ. ನವೀನ್ ಬಲಿಪೂಜೆ ನೆರವೇರಿಸಿದರು. ಕಿಸ್ತ ಯೇಸುವಿನ ಜನನದ ಸಂದೇಶವನ್ನು ಧರ್ಮಗುರುಗಳು ಸಾರಿದರು. ಹಬ್ಬದ ಅಂಗವಾಗಿ ಕಳೆದ ಕೆಲ ದಿನಗಳಿಂದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬಲಿಪೂಜೆಯಲ್ಲಿ ನಡೆದ ಬಲಿಗಾಯನ ಗಮನ ಸೆಳೆಯಿತು. ಹಬ್ಬದ ಅಂಗವಾಗಿ ದೇವಾಲಯವನ್ನು ನಡೆಯಿತು. ಸಂತ ಮೈಕಲರ ದೇವಾಲಯದ ಧರ್ಮಗುರು ಫಾ.ದೀಪಕ್ ಹಾಗೂ ಸಹಾಯಕ ಗುರುಗಳಾದ ಫಾ. ನವೀನ್ ಬಲಿಪೂಜೆ ನೆರವೇರಿಸಿದರು. ಕಿಸ್ತ ಯೇಸುವಿನ ಜನನದ ಸಂದೇಶವನ್ನು ಧರ್ಮಗುರುಗಳು ಸಾರಿದರು. ಹಬ್ಬದ ಅಂಗವಾಗಿ ಕಳೆದ ಕೆಲ ದಿನಗಳಿಂದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬಲಿಪೂಜೆಯಲ್ಲಿ ನಡೆದ ಬಲಿಗಾಯನ ಗಮನ ಸೆಳೆಯಿತು. ಹಬ್ಬದ ಅಂಗವಾಗಿ ದೇವಾಲಯವನ್ನು ಸೋಮವಾರಪೇಟೆ: ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ ಕ್ರಿಶ್ಚಿಯನ್ ಸಮುದಾಯದವರು ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿAದ ಆಚರಿಸಿದರು. ಪಟ್ಟಣದ ಜಯವೀರಮಾತೆ ದೇವಾಲಯದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ವಿಶೇಷ ವಿನ್ಯಾಸದಿಂದ ನಿರ್ಮಾಣಗೊಂಡಿರುವ ಚರ್ಚ್ಅನ್ನು ಕ್ರಿಸ್‌ಮಸ್ ಪ್ರಯುಕ್ತ ವಿದ್ಯುತ್ ದೀಪಗಳು, ಕ್ರಿಸ್‌ಮಸ್ ಸ್ಟಾರ್‌ಗಳಿಂದ ಸಿಂಗರಿಸಲಾಗಿತ್ತು.
ಚರ್ಚ್ನ ಮುಂಭಾಗ ಬಾಲ ಯೇಸುವಿನ ಜನ್ಮ ವೃತ್ತಾಂತವನ್ನು ಬಿಂಬಿಸುವ ಗೋದಲಿಯನ್ನು ನಿರ್ಮಿಸಿ, ನಮಿಸಲಾಯಿತು. ಚರ್ಚ್ನ ಫಾದರ್ ಎಂ. ರಾಯಪ್ಪ ನೇತೃತ್ವದಲ್ಲಿ ಕ್ರಿಶ್ಚಿಯನ್ ಸಮುದಾಯದವರು ಚರ್ಚ್ನಲ್ಲಿ ವಿಶೇಷ ಪೂಜೆ ನೆರವೇರಿಸಿ, ಪ್ರಾರ್ಥನೆ ಸಲ್ಲಿಸಿದರು. ಅಂತೆಯೇ ಅಬ್ಬೂರುಕಟ್ಟೆಯ ಚರ್ಚ್ನಲ್ಲೂ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಫಾದರ್ ಜೋಸೆಫ್ ಅಲೆಕ್ಸಾಂಡರ್ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ, ಪೂಜೆ ನೆರವೇರಿತು. ಹಬ್ಬದ ಅಂಗವಾಗಿ ಚರ್ಚ್ನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಇನ್ನು ಕ್ರಿಶ್ಚಿಯನ್ ಸಮುದಾಯದ ಅನೇಕರು ತಮ್ಮ ತಮ್ಮ ಮನೆಯ ಮುಂಭಾಗ ಗೋದಲಿಯನ್ನು ನಿರ್ಮಿಸಿ ಬಾಲಯೇಸುವಿನ ಸ್ಮರಣೆ ಮಾಡಿದರು. ಮನೆಗೆ ಕ್ರಿಸ್‌ಮಸ್ ಸ್ಟಾರ್ ಅಳವಡಿಸಿ, ಪರಸ್ಪರ ಶುಭಾಶಯ ಕೋರಿದರು. ನೆಂಟರಿಷ್ಟರು, ಸ್ನೇಹಿತರಿಗೆ ಕ್ರಿಸ್‌ಮಸ್ ಕೇಕ್ ವಿತರಿಸಿ ಶುಭಾಶಯ ವಿನಿಮಯ ಮಾಡಿದರು.ವೀರಾಜಪೇಟೆ
ವೀರಾಜಪೇಟೆ : ಎರಡು ಶತಮಾನೋತ್ಸವಕ್ಕೂ ಅಧಿಕ ಕಾಲವನ್ನು ಕಳೆದ ಇತಿಹಾಸ ಪ್ರಸಿದ್ಧ ವೀರಾಜಪೇಟೆಯ ಸಂತ ಅನ್ನಮ್ಮ ದೇವಾಲಯದಲ್ಲಿ ಪವಿತ್ರ ಕ್ರಿಸ್‌ಮಸ್ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು.
ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಕ್ರೆöÊಸ್ತ ಬಾಂಧವರು ನಿನ್ನೆ ರಾತ್ರಿ ಸಂತ ಅನ್ನಮ್ಮ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಮಧ್ಯ ರಾತ್ರಿ ವೇಳೆ ಧರೆಗೆ ಬಂದ ಬಾಲ ಯೇಸುವನ್ನು ಬರಮಾಡಿಕೊಂಡು ವಿಶೇಷ ಪೂಜೆ ಸಲ್ಲಿಸಿದರು.
ಸಂತ ಅನ್ನಮ್ಮ ದೇವಾಲಯದ ಆವರಣದಲ್ಲಿ ರೂಪಿಸಿದ ಯೇಸುವಿನ ಜನನವನ್ನು ಸಾರುವ ಗೋದಲಿಯಲ್ಲಿ ದೇವಾಲಯದ ಪ್ರಧಾನ ಧರ್ಮಾಧಿಕಾರಿ ರೆ:ಫಾ: ಮದಲೈಮುತ್ತು ಅವರು ಬಾಲ ಯೇಸುವಿನ ಮೂರ್ತಿಯನ್ನು ಮಲಗಿಸಿ ನಮನ ಸಲ್ಲಿಸಿದರು. ಈ ಸಂದರ್ಭ ರೆ:ಫಾ: ರೋನಿ ರವಿ ಕುಮಾರ್ ಇತರ ಧರ್ಮಾಧಿಕಾರಿಗಳು ಹಾಜರಿದ್ದರು.
ಕೋವಿಡ್-೧೯ ಹಿನ್ನೆಲೆಯಲ್ಲಿ ಕ್ರೆöÊಸ್ತಬಾಂಧವರು ದೇವಾಲಯದಲ್ಲಿ ಒಮ್ಮತವಾಗಿ ಸೇರಿ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಷರತ್ತು ಬದ್ಧವಾಗಿ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಿದರು. ಹಬ್ಬದ ಪ್ರಯುಕ್ತ ಸಂತ ಅನ್ನಮ್ಮ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕೂಡಿಗೆ: ಕೂಡಿಗೆಯ ಪವಿತ್ರ ತಿರು ಕುಟುಂಬ ದೇವಾಲಯದಲ್ಲಿ ಕ್ರಿಸ್ಮಸ್ ಹಬ್ಬವನ್ನು ಸರಳವಾಗಿ ಅಚರಣೆ ಮಾಡಲಾಯಿತು.
ದೇವಾಲಯದ ಸಭಾಂಗಣದಲ್ಲಿ ಕ್ರಿಶ್ಚಿಯನ್ ಬಾಂಧವರು ಒಂದೆಡೆ ಸೇರಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಚರ್ಚ್ ವಿದ್ಯುತ್ ದೀಪಗಳಿಂದ ಅಲಂಕಾರಗೊAಡಿತ್ತು. ಬಾಲ ಯೇಸುವಿನ ಜನನದ ಗೋದಲಿಯು ಆಕರ್ಷಣೀಯವಾಗಿತು. ಭಾಗವಹಿಸಿದ್ದ ಎಲ್ಲರಿಗೂ ಸಿಹಿ ವಿತರಣೆ ಮಾಡಲಾಯಿತ್ತು. ಚರ್ಚ್ನ ಮುಖ್ಯಸ್ಥ ಜಾನ್ ಡಿ ಕುನ್ಹ ಹಾಜರಿದ್ದರು. ಪ್ರಾರ್ಥನೆಯ ಸಂದರ್ಭದಲ್ಲಿ ಕೂಡಿಗೆ-ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕ್ರಿಶ್ಚಿಯನ್ ಬಾಂಧವರು ಭಾಗವಹಿಸಿದ್ದರು.*ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿನ ಎಲ್ಲಾ ಚರ್ಚ್ಗಳಲ್ಲಿ ಕ್ರಿಸ್ಮಸ್ ಆಚರಣೆ ಶ್ರದ್ಧಾಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಗೋಣಿಕೊಪ್ಪ ಸಂತ ಥಾಮಸ್ ಚರ್ಚ್ನಲ್ಲಿ ಗೋದಲಿ ನಿರ್ಮಿಸಿ ಕ್ರೆöÊಸ್ತ ಬಾಂಧವರು ಯೇಸು ಕ್ರಿಸ್ತನನ್ನು ಪ್ರಾರ್ಥಿಸಿದರು. ಸಂತ ಥಾಮಸ್ ಚರ್ಚ್ನ ಫಾದರ್ ಜಾರ್ಜ್ ಅವರು ಕ್ರೆöÊಸ್ತ ಬಾಂಧವರಿಗೆ ಸಿಹಿ ಹಂಚುವ ಮೂಲಕ ಆಚರಣೆಯನ್ನು ಸಂಭ್ರಮಿಸಿದರು.
ಪೊನ್ನAಪೇಟೆ ಸಂತ ಅಂತೋನಿ ಚರ್ಚ್ನಲ್ಲಿ ಪ್ರಾರ್ಥನೆ ನಡೆಯಿತು. ಭಕ್ತರು ಚರ್ಚ್ನ ಮುಂಭಾಗದಲ್ಲಿ ಗೋದಲಿ ನಿರ್ಮಿಸಿದರು. ದೇವರಪುರ, ಪಾಲಿಬೆಟ್ಟ, ತಿತಿಮತಿ ಚರ್ಚುಗಳು ಕ್ರಿಸ್ಮಸ್ ಆಚರಣೆ ವಿಜೃಂಭಣೆಯಿAದ ನಡೆಯಿತು.