ಸಿದ್ದಾಪುರ, ಡಿ. ೨೫ : ಗ್ರಾ.ಪಂ. ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಬಿಡುಗಡೆಯಾದ ಮತದಾರರ ಪಟ್ಟಿಯಲ್ಲಿ ಹೆಸರನ್ನು ತೆಗೆಯಲಾಗಿದ್ದು, ತನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಸಿ.ಐ.ಟಿ.ಯು ಜಿಲ್ಲಾಧ್ಯಕ್ಷ ಮಹದೇವ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮ್ಮತ್ತಿ ಗ್ರಾ.ಪಂ.ನಲ್ಲಿ ಎರಡು ಅವಧಿ ಸದಸ್ಯನಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಲಾಗಿತ್ತು. ಡಿ.೧೦ ರಂದು ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ನೀಡುವ ಸಂದರ್ಭ ಹಳೆಯ ಮತದಾರರ ಪಟ್ಟಿಯಲ್ಲಿ ಹೆಸರಿತ್ತು. ಬಳಿಕ ನಾಮಪತ್ರ ಪರಿಶೀಲಿಸುವ ಸಂದರ್ಭ ನೂತನ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲವೆಂದು ನಾಮಪತ್ರ ತಿರಸ್ಕರಿಸಲಾಗಿದೆ. ಇದರಿಂದ ತನಗೆ ಅನ್ಯಾಯ ಆಗಿದೆ ಎಂದು ಆರೋಪಿಸಿದರು.

ಗ್ರಾ.ಪಂ. ಚುನಾವಣೆಗೆ ರಾಚಪ್ಪಾಜಿ ಎಂಬವರು ಕೂಡ ಸ್ಪರ್ಧಿಸಿದ್ದು, ಸೂಚಕರಾಗಿ ತಾನು ಸಹಿ ಹಾಕಿದ್ದು, ಇದೀಗ ಇಬ್ಬರ ನಾಮಪತ್ರ ಕೂಡ ತಿರಸ್ಕರಿಸಲಾಗಿದೆ. ಈ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.