ಮಡಿಕೇರಿ, ಡಿ. ೨೫: ಕಾನೂನು ಮಾಪನಶಾಸ್ತç ಇಲಾಖೆ ವತಿಯಿಂದ ತಾತ್ಕಾಲಿಕ ಸತ್ಯಾಪನೆ ಮುದ್ರೆ ಶಿಬಿರ ತಾ. ೨೬ ರಿಂದ (ಇಂದಿನಿAದ) ತಾ. ೩೧ ರವರೆಗೆ ಕೊಡ್ಲಿಪೇಟೆಯ ಯತೀಶ್ ಕಾಂಪ್ಲೆಕ್ಸ್ ಬಸವೇಶ್ವರ ಕಲ್ಯಾಣ ಮಂಟಪದ ಎದುರು ಏರ್ಪಡಿಸಲಾಗಿದೆ. ವರ್ತಕರು ಉಪಯೋಗಿಸುವ ಅಳತೆ, ತೂಕ ಮತ್ತು ತೂಕದ ಸಾಧನಗಳನ್ನು ಹಾಜರುಪಡಿಸಿ ಸತ್ಯಾಪನೆ ಮುದ್ರೆ ಮಾಡಿಸಿಕೊಳ್ಳುವಂತೆ ಕಾನೂನು ಮಾಪನ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.