ಶ್ರೀಮಂಗಲ, ಡಿ. ೨೫ : ಕೊಡವ ಸಂಸ್ಕೃತಿಯ ಭಾಗವಾದ ತಕ್ಕಾಮೆಗೆ ಗುರುವಿನ ಪ್ರಾಮುಖ್ಯತೆಯನ್ನು ನೀಡಬೇಕು. ತಕ್ಕಾಮೆ ಎಂಬುದು ಕೊಡವರ ಅಲಿಖಿತ ಸಂವಿಧಾನವಾಗಿದೆ. ಇದು ತಕ್ಕಮುಖ್ಯಸ್ಥರಿಗೆ ಇರುವ ಸಾಮೂಹಿಕ ಜವಾಬ್ದಾರಿಯಾಗಿದೆ. ತಕ್ಕಾಮೆಯನ್ನು ಬಲಪಡಿಸಬೇಕು, ಕೊಡಗಿನದ್ಯಾಂತ ತಕ್ಕರನ್ನು ಗುರುತಿಸಿ ಸಾಮಾಜಿಕ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ತಕ್ಕಾಮೆಗೆ ಪ್ರಾಮುಖ್ಯತೆ ನೀಡುತ್ತಿರುವುದು ಸ್ವಾಗತಾರ್ಹ. ಯುವ ಪೀಳಿಗೆಗೆ ಇದರ ಮಹತ್ವವನ್ನು ಅರಿವು ಮೂಡಿ¸ Àಬೇಕಾಗಿದೆ, ಹಿಂದಿನ ಕಾಲದಂತೆ ತಕ್ಕಾಮೆಗೆ ಪ್ರಾಮುಖ್ಯತೆ ನೀಡಿದಾಗ ತಕ್ಕಾಮೆಯ ನೆರಳಿನಲ್ಲಿ ಕೊಡವ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಸಮೃದ್ಧವಾಗಿ ಬೆಳೆಯುತ್ತದೆ ಎಂದು ದೇಶ ತಕ್ಕರಾದ ಮಾತಂಡ ಸಿ.ಮೊಣ್ಣಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಮೊದಲ ಪುಟದಿಂದ) ಯುನೈಟೆಡ್ ಕೊಡವ ಆರ್ಗನೈಷೇಸನ್ ಟ್ರಸ್ಟ್ (ಯುಕೊ) ವತಿಯಿಂದ ಬೇಗೂರಿನ ಕೇವ್‌ರಿಡ್ಜ್ ರೆಸಾರ್ಟ್ನಲ್ಲಿ ಆಯೋಜಿಸಿದ್ದ ತಕ್ಕಮುಖ್ಯಸ್ಥರ ಸಮಾವೇಶವಾದ “ಕೊಡವ ತಕ್ಕೋರ್ಮೆ-೨೦೨೦” ಕಾರ್ಯಕ್ರಮವನ್ನು ‘ಕುತ್ತ್ಂಬೊಳ್‌ಚ’ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ತಕ್ಕಾಮೆ ಎಂಬುದು ಹಿಂದೆ ಸಮಾಜಕ್ಕೆ ಮತ್ತು ಜನಾಂಗಕ್ಕೆ ದೊಡ್ಡ ಬಲವಾಗಿತ್ತು. ನಾಗರಿಕತೆಯ ಬೆಳವಣಿಗೆಯಾದಂತೆ, ವ್ಯವಹಾರಕ್ಕಾಗಿ ಸಮಿತಿ ರಚನೆ ಮತ್ತು ರಾಜಕೀಯ ಆಡಳಿತ ಮಂಡಳಿ ರಚನೆಯಿಂದ ತಕ್ಕಾಮೆ ಕ್ಷೀಣವಾಗಿದೆ. ಅದನ್ನು ಬಲಪಡಿಸುವ ಕೆಲಸವಾಗುತ್ತಿರುವುದು ಉತ್ತಮ ಬೆಳವಣಿಗೆ, ಎಲ್ಲಾ ಕೊಡವ ಸಮಾಜ ಆಯಾ ಭಾಗದ ತಕ್ಕಮುಖ್ಯಸ್ಥರಿಗೆ ಗೌರವ ನೀಡಲು ತಮ್ಮ ಬೈಲಾದಲ್ಲಿ ನಮೂದಿಸಬೇಕು ಎಂದು ಹೇಳಿದರು.

ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಯುಕೊ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜುಚಿಣ್ಣಪ್ಪ ಅನಾದಿಕಾಲದಿಂದಲೂ ಕೊಡವ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿರುವ ಮತ್ತು ಇದರ ನೆರಳಲ್ಲಿ ಸಮೃದ್ಧ ಪರಂಪರೆಯನ್ನು ಹೊಂದಿದ್ದ ಕೊಡವ ಆಧ್ಯಾತ್ಮಿಕ ನಾಯಕತ್ವವಾದ ತಕ್ಕಾಮೆಯನ್ನು ಬಲಪಡಿಸಲು ಇತರ ಜನಾಂಗದಲ್ಲಿರುವ ಮಠಾಧೀಶರಂತೆ ಕೊಡವರಿಗೂ ತಕ್ಕಾಮೆ ಮೂಲಕ ಆಧ್ಯಾತ್ಮಿಕ ನಾಯಕತ್ವವನ್ನು ಪೂರ್ವಜರು ಕಲ್ಪಿಸಿದ್ದರು.

ಕೊಡವರು ಎದುರಿಸುತ್ತಿರುವ ಅಭದ್ರತೆ ಹಾಗೂ ಸಮಸ್ಯೆಗಳಿಗೆ ತಕ್ಕಾಮೆಯ ನಿರ್ಲಕ್ಷö್ಯ ಒಂದು ಪ್ರಮುಖ ಕಾರಣವಾಗಿದೆ. ಆದ್ದರಿಂದ ತಕ್ಕಾಮೆಯನ್ನು ಬಲಪಡಿಸುವ ಸಂಕಲ್ಪವನ್ನು ತೊಡಬೇಕೆಂದು ಹೇಳಿದರು. ತಕ್ಕಾಮೆಯ ಬಗೆಗಿನ ಉದಾಸೀನತೆಯಿಂದ ಕೊಡವ ಜನಾಂಗದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ತಕ್ಕಾಮೆ ಬಗ್ಗೆ ತಕ್ಕರು ಅಭಿಮಾನ ಮತ್ತು ಹೆಮ್ಮೆ ಪಡಬೇಕು, ಹಾಗೆಯೇ ತಕ್ಕರಿಗೆ ಶಿಷ್ಟಾಚಾರದಂತೆ ಗೌರವ ನೀಡಬೇಕಾಗಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮಕ್ಕೆ ಮೊದಲು ದೇಶತಕ್ಕರನ್ನು ಸಾಂಪ್ರದಾಯಿಕ ‘ತಳಿಯತಕ್ಕಿ ಬೊಳಕ್’ ಮತ್ತು ‘ಪಟ್ಟ್’ ಹಿಡಿದು ಗೌರವಿಸಿ ವೇದಿಕೆಗೆ ಕರೆತರಲಾಯಿತು. ವೇದಿಕೆಯಲ್ಲಿ ಬೇಗೂರು ಊರ್‌ತಕ್ಕ ಕುಟುಂಬದ ಬೈರಂಡ ಪೂಣಚ್ಚ, ಹುದಿಕೇರಿ ಅಂಜಿಕೇರಿ ನಾಡ್ ಜೋಡಿತಕ್ಕ ಕುಟುಂಬದ ಅಜ್ಜಿಕುಟ್ಟಿರ ಗಿರೀಶ್, ಚೆಕ್ಕೇರ ರಾಜೇಶ್, ಸೀಮೆತಕ್ಕ ಕುಟುಂಬಗಳಾದ ಕಳ್ಳಂಗಡ ಬೋಪಯ್ಯ ಅಪ್ಪಾಜಿ, ಬೊಳ್ಳೆರ ರಾಜಸುಬ್ಬಯ್ಯ, ಪಾಂಡಿರ ಅಯ್ಯಣ್ಣ, ಪರದಂಡ ವಿಠಲಭೀಮಯ್ಯ, ಪರುವಂಡ ಪೊನ್ನಪ್ಪ, ಸೀಮೆತಕ್ಕ ಕುಟುಂಬವಾದ ಪೋರೆರ ಮತ್ತು ಬುಡುವಂಡ ಕುಟುಂಬದ ಅನುಪಸ್ಥಿತಿಯಲ್ಲಿ ವೇದಿಕೆಯಲ್ಲಿ ಆ ಸ್ಥಾನಕ್ಕೆ ಸಾಂಪ್ರದಾಯಿಕ ‘ಪಟ್ಟು’ ಇಟ್ಟು ಗೌರವ ನೀಡಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಸಾಂಪ್ರದಾಯಿಕವಾಗಿ ದೇಶತಕ್ಕರಾದ ಮಾತಂಡ ಸಿ.ಮೊಣ್ಣಪ್ಪ ಅವರು ಎಲ್ಲಾ ತಕ್ಕರ ಪರವಾಗಿ ‘ತಪ್ಪಡಕ’À ಕಟ್ಟಿ ಪ್ರಾರ್ಥಿಸಿ ಸಾಮೂಹಿಕವಾಗಿ ‘ಗೆಜ್ಜೆತಂಡಿಗೆ’ ಅಕ್ಕಿ ಹಾಕಿ ಆಶೀರ್ವಾದ ಪಡೆಯಲಾಯಿತು. ಡಾ. ಕಾಳಿಮಾಡ ಶಿವಪ್ಪ ಪಾರ್ಥಿಸಿ, ಉಳುವಂಗಡ ಲೋಹಿತ್‌ಭೀಮಯ್ಯ ಕೊಡವ ಗೀತೆ ಹಾಡಿದರು, ಕಳ್ಳಿಚಂಡ ರಾಬಿನ್ ಸುಬ್ಬಯ್ಯ ನಿರೂಪಿಸಿ, ಮಂಜುಚಿಣ್ಣಪ್ಪ ವಂದಿಸಿದರು.

ಸಮಾವೇಶದಲ್ಲಿ ತಕ್ಕಾಮೆ ಬಲ ಪಡಿಸುವ ನಿಟ್ಟಿನಲ್ಲಿ ಪರಕಟಗೇರಿ ಕಾಳಿಮಾಡ ಮೋಟಯ್ಯ, ಹುದಿಕೇರಿ ಅಜ್ಜಿಕುಟ್ಟೀರ ಮಾದಯ್ಯ, ನೆಲಜಿಯ ಬದ್ದಂಚೆೆಟ್ಟೀರ ನಾಣಯ್ಯ, ಕಾವಡಿಯ ನೆಲ್ಲಮಕ್ಕಡ ಶಂಭು, ತಾವಳಗೇರಿಯ ಕೈಬುಲೀರ ಹರೀಶ್‌ಅಪ್ಪಯ್ಯ, ಬಲ್ಲತ್ತ್ನಾಡ್‌ನ ತೋಲಂಡ ಕಟ್ಟಿಪೂಣಚ್ಚ, ಬಲ್ಯಮುಂಡೂರಿನ ಮಾಚಿಮಾಡ ರವೀಂದ್ರ, ಹುದಿಕೇರಿಯ ಚೆಕ್ಕೇರ ರಾಜೇಶ್ ಸಲಹೆ ನೀಡಿದರು. ಇವರ ಸಲಹೆಯನ್ನು ಮುಂದಿನ ತಕ್ಕಮುಖ್ಯಸ್ಥರ ಸಭೆಯಲ್ಲಿ ಗಣನೆಗೆ ತೆಗೆದುಕೊಂಡು ಕ್ರಮಕೈಗೊಳ್ಳುವ ಭರವಸೆಯನ್ನು ದೇಶತಕ್ಕರ ಪರವಾಗಿ ಮಂಜು ಚಿಣ್ಣಪ್ಪ ವ್ಯಕ್ತಪಡಿಸಿದರು.

- ಅಣ್ಣೀರ ಹರೀಶ್ ಮಾದಪ್ಪ