ಮಡಿಕೇರಿ, ಡಿ. ೨೫: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ದಕ್ಷಿಣ ಕೊಡಗಿನ ಬಲ್ಲತ್‌ನಾಡ್ ಸಮೀಪದ ಪುಲಿಕೋಟ್ ಊರ್ ಮಂದ್‌ನಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಯಿತು.

ಸಿ.ಎನ್.ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಬಲ್ಲತ್‌ನಾಡ್ ಸಮೀಪದ ಅಧಿಕ ಮಂದಿ ಪಾಲ್ಗೊಂಡು ಸಿ.ಎನ್.ಸಿ. ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ನಾಚಪ್ಪ ಅವರು ಮಾತನಾಡಿ ಕೊಡವ ಬುಡಕಟ್ಟು ಕುಲ ಹಾಗೂ ಭೂ ರಾಜಕೀಯ- ಸ್ವಾಯತ್ತತೆಯ ಕುರಿತು ಮಾಹಿತಿ ನೀಡಿದರು.