ಸೋಮವಾರಪೇಟೆ, ಡಿ.೨೫: ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಸಿಲ್ವರ್ ಮರದ ಕೊಂಬೆ ಬಿದ್ದು ಟಿಂಬರ್ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಸಮೀಪದ ಗೌಡಳ್ಳಿಯಲ್ಲಿ ನಡೆದಿದೆ.
ಮೂಲತಃ ಪಟ್ಟಣ ಸಮೀಪದ ಅಲೇಕಟ್ಟೆ-ಚೌಡ್ಲು ಗ್ರಾಮದ ನಿವಾಸಿ, ಪ್ರಸ್ತುತ ವಳಗುಂದದಲ್ಲಿ ನೆಲೆಸಿದ್ದ ವೆಂಕಟೇಶ್(೫೧) ಮೃತಪಟ್ಟವರು. ಗೌಡಳ್ಳಿ ಗ್ರಾಮದ ಪ್ರಸನ್ನ ಎಂಬವರ ಕಾಫಿ ತೋಟದಲ್ಲಿ ಸಿಲ್ವರ್ ಮರ ಕಡಿದು ಬೀಳಿಸುವ ಸಂದರ್ಭ ರೆಂಬೆ ತಲೆ ಮೇಲೆ ಬಿದ್ದು ತೀವ್ರಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಸಂದರ್ಭ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ಲೀಲಾ ಸೇರಿದಂತೆ ಈರ್ವರು ಮಕ್ಕಳನ್ನು ಅಗಲಿದ್ದಾರೆ.