ಕುಶಾಲನಗರ, ಡಿ. 24: ಟಿಬೇಟಿಯನ್ ಆಂತರಿಕ ಸರಕಾರದ ಮಾಜಿ ಗೃಹ ಸಚಿವರಾದ ಡೋಲ್ಮ ಅವರು ಬೈಲುಕೊಪ್ಪೆಗೆ ಭೇಟಿ ನೀಡಿದರು. ಧರ್ಮ ಶಾಲಾದಿಂದ ಆಗಮಿಸಿದ ಡೋಲ್ಮ ಅವರನ್ನು ಬೈಲುಕೊಪ್ಪ ಟಿಬೇಟಿಯನ್ ನಿರಾಶ್ರಿತರ ಶಿಬಿರದ ಪ್ರಮುಖರು, ಧಾರ್ಮಿಕ ಗುರುಗಳು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಟಿಬೇಟಿಯನ್ ನಿರಾಶ್ರಿತರ ಆಂತರಿಕ ಸರಕಾರಕ್ಕೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಚುನಾವಣೆ ಮುಂದಿನ ಜನವರಿಯಲ್ಲಿ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಡೋಲ್ಮ ಅವರು ಭೇಟಿ ನೀಡಿರುವುದಾಗಿ ಶಿಬಿರದ ಪ್ರಮುಖರಾದ ಗೊಂಪೊಗ್ಯಾಲ್ಸ್ಟಿನ್ ತಿಳಿಸಿದ್ದಾರೆ.