ಕೂಡಿಗೆ, ಡಿ. 24: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕಕ್ಕೆ ಹೊಳೆ ಮುಖ್ಯ ನಾಲೆಯ ಮಧ್ಯ ದಲ್ಲಿರುವ ವಿದ್ಯುತ್ ಕಂಬ ಗಳನ್ನು ತೆರವುಗೊಳಿಸುವಂತೆ ಈ ಭಾಗದ ರೈತರು ಆಗ್ರಹಿಸಿದ್ದಾರೆ. ಕಕ್ಕೆ ಹೊಳೆ ಅಣೆಕಟ್ಟೆಯ ನೀರು ಸರಾಗವಾಗಿ ನಾಲೆಯಲ್ಲಿ ಹರಿಯುವಂತೆ ಮತ್ತು ಸಣ್ಣ ನೀರಾವರಿ ಇಲಾಖೆಯ ಮೂಲಕ ನಡೆಯುವ ಮುಖ್ಯ ನಾಲೆ ದುರಸ್ತಿಗೆ ಇಲಾಖೆಯು ಮುಂದಾಗಿದೆ. ಅದರಂತೆಯೇ ವಿದ್ಯುತ್ ಕಂಬಗಳು ಕಾಲುವೆ ಮಧ್ಯ ಇರುವುದರಿಂದ ಕಾಲುವೆಯ ದುರಸ್ತಿಗೆ ಭಾರೀ ತೊಂದರೆಗಳು ಆಗುತ್ತಿದ್ದು, ಕುಶಾಲನಗರ ವಲಯದ ವಿದ್ಯುತ್ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ವಿದ್ಯುತ್ ಕಂಬಗಳನ್ನು ತೆರೆಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.