ಗುಡ್ಡೆಹೊಸೂರು, ಡಿ. 24: ಮೈಸೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಮಂಥನಹಳ್ಳಿಯಿಂದ ಆನೆಕಾಡು ವಿಭಾಗದ ಮೂಲಕ ಉದ್ದೇಶಿಸಿರುವ ಬೈಪಾಸ್ ರಸ್ತೆಗೆ ಬಸವನಹಳ್ಳಿ, ಆನೆಕಾಡು ವಿಭಾಗದಲ್ಲಿ ಸ್ಥಳ ಗುರುತು ಮಾಡಲಾದ ಭೂ ಮಾಲೀಕರ ಮತ್ತು ಸಾರ್ವಜನಿಕರ ಅಭಿಪ್ರಾಯವನ್ನು ಕೇಂದ್ರ ನಿಯೋಜಿತ ತಂಡ ಸಂಗ್ರಹಿಸಿತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿಯೋಜಿಸಿದ್ದ ಮಹಮ್ಮದ್ ರಫಿ ಮತ್ತು ಮನಮೋಹನ್ಸಿಂಗ್ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿದರು. 4 ಪಥದ ರಸ್ತೆ ಕೊಡಗಿಗೆ ಬೇಡ ಅಲ್ಲದೆ ಬೈಪಾಸ್ ರಸ್ತೆ ಮಾಡುವ ಬದಲು ಇರುವ ರಸ್ತೆಯ ಬದಿಯನ್ನು ತಲಾ ಎರಡು ಮೀಟರ್ ವಿಸ್ತರಿಸಿ ಎಂದು ಗ್ರಾಮಸ್ಥರು ತಿಳಿಸಿದರು. ರಸ್ತೆ ಬಂದರೆ ಪರಿಹಾರ ನೀಡುವ ಬಗ್ಗೆ ಪ್ರಸ್ತಾಪಿಸಿದಾಗ, ಸಾರ್ವಜನಿಕರು ನಮಗೆ ಪರಿಹಾರವೂ ಬೇಡ, ನಾಲ್ಕು ಪಥದ ರಸ್ತೆಯೂ ಬೇಡ ಎಂದರು.
- ಗಣೇಶ್ ಕುಡೆಕಲ್