ಮಡಿಕೇರಿ, ಡಿ. 24: ಐ.ಸಿ.ಎ.ಆರ್-ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ಪ್ರಾದೇಶಿಕ ಕೇಂದ್ರದ ವತಿಯಿಂದ ಅಪ್ಪಂಗಳದಲ್ಲಿ ತಾ. 23 ರಂದು ರೈತÀ ದಿನಾಚರಣೆಯನ್ನು ಪಾಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.
ಗ್ರಾಮದ ಹಿರಿಯರಾದ ಹರೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಡಾ. ಎಸ್.ಜೆ. ಅಂಕೇಗೌಡ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭ ಭಾಗವಹಿಸಿದವರಿಗೆ ರೈತÀ ದಿನಾಚರಣೆ ಮತ್ತು ಸ್ವಚ್ಛತಾ ಅಭಿಯಾನದ ಬಗ್ಗೆ ಮಾಹಿತಿ ನೀಡಲಾಯಿತು. ಪಾಲ್ಗೊಂಡಿದ್ದ ರೈತರು, ಐ.ಐ.ಎಸ್.ಆರ್. ವಿಜ್ಞಾನಿಗಳೊಂದಿಗೆ ಕಾಳುಮೆಣಸು ಮತ್ತು ಏಲಕ್ಕಿ ಕೃಷಿಯ ಬಗ್ಗೆ ಚರ್ಚೆ ನಡೆಸಿದರು. ಕಾರ್ಯಕ್ರಮದ ನಂತರ ರೈತರು ಮತ್ತು ವಿಜ್ಞಾನಿಗಳು, ಕೃಷಿಕರಾದ ಪೊನ್ನಣ್ಣ ಅವರ ಕಾಫಿ ಮತ್ತು ಕಾಳುಮೆಣಸಿನ ತೋಟಕ್ಕೆ ಭೇಟಿ ನೀಡಿದರು.