ಕೂಡಿಗೆ, ಡಿ. 22: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಸಮೀಪದ ಹುಲಗುಂದ ಗ್ರಾಮದಲ್ಲಿರುವ ಮೀನು ಮರಿ ಉತ್ಪತ್ತಿ ಮತ್ತು ಸಾಕಾಣಿಕೆ ಕೇಂದ್ರದಲ್ಲಿ ಮೀನು ಮರಿ ಸಾಕಾಣಿಕೆ ಕೇಂದ್ರದ ಹೊಸ ತೊಟ್ಟಿಗಳ ಕಾಮಗಾರಿ ನಡೆಯುತ್ತಿದೆ.
ರಾಜ್ಯ ಸರ್ಕಾರದ ಮೀನುಗಾರಿಗೆ ಇಲಾಖೆಯ ನೂತನ ಯೋಜನೆ ಅಡಿಯಲ್ಲಿ ರೂ. 2 ಕೋಟಿ ವೆಚ್ಚದಲ್ಲಿ ಹೊಸ ಮಾದರಿಯ ಮೀನು ಮರಿ ಸಾಕಾಣಿಕೆಯ ಮೂರು ಹೊಸ ತೊಟ್ಟಿಗಳ ಕಾಮಗಾರಿಯು ಪ್ರಗತಿಯತ್ತÀ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಉತ್ತಮವಾದ ಹೈಬ್ರಿಡ್ ತಳಿಯ ಮೀನು ಮರಿಗಳನ್ನು ಸಾಕುವುದರ ಮೂಲಕ ಅಭಿವೃದ್ಧಿಪಡಿಸಿ ನಂತರದ ದಿನಗಳಲ್ಲಿ ರೈತರಿಗೆ ಮರಿಗಳನ್ನು ವಿತರಣೆ ಮಾಡುವ ಕಾರ್ಯವನ್ನು ಹಮ್ಮಿಕೊಳ್ಳುವ ಚಿಂತನೆ ಇರುವುದಾಗಿ ಅಧಿಕಾರಿ ತಿಳಿಸಿದ್ದಾರೆ.