ಸೋಮವಾರಪೇಟೆ, ಡಿ. 22: ಇಲ್ಲಿಗೆ ಸಮೀಪದ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಕಾಲ ಸಪ್ತಾಹ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಚ್.ಎನ್. ರಾಜು ಉದ್ಘಾಟಿಸಿದರು. ನಂತರ ಮಾತನಾಡಿ, ರಾಜ್ಯ ಸರ್ಕಾರವು ಬಹುತೇಕ ಇಲಾಖಾ ಕಚೇರಿಗಳನ್ನು ಸಕಾಲ ವ್ಯಾಪ್ತಿಗೆ ತಂದಿದ್ದು, ನಿಗದಿತ ಅವಧಿಯಲ್ಲಿ ಕೆಲಸಗಳನ್ನು ಮಾಡಿಸಿಕೊಳ್ಳಲು ಸಕಾಲದಡಿಯಲ್ಲಿ ಅರ್ಜಿ ಸಲ್ಲಿಸಬೇಕಿದೆ ಎಂದರು.
ಸಕಾಲದಡಿಯಲ್ಲಿ ಎಲ್ಲ ಕೆಲಸಗಳಿಗೂ ಒಂದೊಂದು ಅವಧಿ ನಿಗದಿಗೊಳಿಸಿದ್ದು, ನಿಗದಿತ ಸಮಯದಲ್ಲಿಯೇ ಸರ್ಕಾರಿ ನೌಕರರು ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಬೇಕಿದೆ. ಇದರಿಂದಾಗಿ ಲಂಚದ ಹಾವಳಿ, ಹೆಚ್ಚಿನ ಅಲೆದಾಟ ಇಲ್ಲದೆ, ಕೆಲಸಗಳಾಗುತ್ತವೆ. ಈ ಬಗ್ಗೆ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಜಾಗೃತಿ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರುಗಳಾದ ಕೆ.ಹೆಚ್. ಧನಲಕ್ಷ್ಮಿ, ಎಂ.ಎಸ್. ಶಿವಮೂರ್ತಿ, ಸಿಬ್ಬಂದಿಗಳಾದ ಧರ್ಮಪ್ಪ, ಹೆಚ್.ಜೆ. ಜವರ, ಬಿ.ಟಿ. ರವಿ, ಭವ್ಯ ಉಪಸ್ಥಿತರಿದ್ದರು.