ಗೋಣಿಕೊಪ್ಪಲು, ಡಿ. 22: ಗೋಣಿಕೊಪ್ಪ ಕೃಷಿ ಪತ್ತಿನ ಸಹಕಾರ ಸಂಘ 2019-20 ಸಾಲಿನಲ್ಲಿ ರೂ. 1.20 ಕೋಟಿ ಲಾಭಗಳಿಸಿದ್ದು, ಸಂಘದ ಸದಸ್ಯರಿಗೆ ಶೇ. 25 ಡಿವಿಡೆಂಟ್ ಮತ್ತು ಸದಸ್ಯರುಗಳಿಗೆ ಊಟದ ಭತ್ಯೆಯಾಗಿ
ರೂ. 1500 ಗಳನ್ನು ನೀಡಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕುಪ್ಪಂಡ ಚಿಟ್ಟಿಯಪ್ಪ ವಾರ್ಷಿಕ ಮಹಾಸಭೆಯಲ್ಲಿ ಮಾಹಿತಿ ನೀಡಿದರು. ಗೋಣಿಕೊಪ್ಪಲು ವಿನ ಬ್ಯಾಂಕಿನ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಮಹಾ ಸಭೆಯಲ್ಲಿ ಮಾತನಾಡಿದ ಚಿಟ್ಟಿಯಪ್ಪ, ಸಂಘವು ರೂ. 2.13 ಕೋಟಿ ಪಾಲು ಬಂಡವಾಳದೊಂದಿಗೆ 2114 ‘ಎ’ ತರಗತಿ ಸದಸ್ಯರನ್ನು ಹೊಂದಿರುತ್ತದೆ. ಹಾಗೂ ತನ್ನ ಸದಸ್ಯರುಗಳಿಂದ ರೂ. 48.11 ಕೋಟಿ ಠೇವಣಿ ಸಂಗ್ರಹಣೆ ಮಾಡಿದ್ದು ಸದರಿ ಸಾಲಿನಲ್ಲಿ ಠೇವಣಿಗಳ ಮೇಲೆ ಭರಿಸಿದ ವೆಚ್ಚ ರೂ. 3.50 ಕೋಟಿಗಳಾಗಿದ್ದು, ಶೇ. 7.28 ಆಗಿರುತ್ತದೆ. ಸಂಘದ ಸದಸ್ಯರುಗಳಿಗೆ ರೂ. 39.73 ಕೋಟಿ ಸಾಲವನ್ನು ಬಟವಾಡೆ ಮಾಡಲಾಗಿದ್ದು, ರೂ. 39.05 ಕೋಟಿ ವಸೂಲಾಗಿದ್ದು, ಇದು ಶೇ. 98 ಆಗಿರುತ್ತದೆ. ಹಾಗೂ ದಿನಾಂಕ 31.03.2020ಕ್ಕೆ ರೂ. 36.67 ಕೋಟಿ ಸಾಲ ಬಾಕಿ ಇರುತ್ತದೆ. ಕೃಷಿ ಸಾಲವು ವರದಿ ಸಾಲಿನಲ್ಲಿ ಶೇ. 99.9 ರಷ್ಟು ವಸೂಲಾತಿ ಆಗಿರುತ್ತದೆ. ಸಂಘÀವು 14,376 ಚೀಲ ಕಾಫಿ ಠೇವಣಿ ಸಂಗ್ರಹಿಸಿ ಶೇ. 10 ಬಡ್ಡಿ ದರದಲ್ಲಿ ರೂ. 5.07 ಕೋಟಿ ಕಾಫಿ ಠೇವಣಿ ಮುಂಗಡ ಸಾಲವನ್ನು ಸದಸ್ಯರಿಗೆ ಬಟವಾಡೆ ಮಾಡಲಾಗಿದೆ. ವ್ಯಾಪಾರ ವಿಭಾಗದಲ್ಲಿ ಪ್ರಸಕ್ತ ಸಾಲಿನಲ್ಲಿ ರೂ. 2,89,789.07 ಲಾಭಗಳಿಸಿದ್ದು, ಸದಸ್ಯರುಗಳು ತಮಗೆ ಅಗತ್ಯವಿರುವ ಗೊಬ್ಬರ ಮತ್ತು ಹತ್ಯಾರು ಸಾಮಗ್ರಿಗಳನ್ನು ಸಂಘದಿಂದಲೇ ಖರೀದಿಸಿ ಹೆಚ್ಚಿನ ಲಾಭಗಳಿಸಲು ಸದಸ್ಯರ ಸಹಕಾರ ಅಗತ್ಯವೆಂದರು.
ಸಂಘದ ಸುಸ್ತಿ ಸಾಲ ರೂ. 2.21 ಕೋಟಿ ಬಾಕಿ ಇದ್ದು, ಲೆಕ್ಕಪರಿಶೋಧನಾ ಸಮಯಕ್ಕೆ ರೂ. 1.43 ಕೋಟಿ ವಸೂಲಾತಿಯಾಗಿದೆ. ಸಂಘದ ಎನ್ಪಿಎ ಸಾಲದ ಮೊತ್ತ ರೂ. 48,54,300 ಗಳಾಗಿದ್ದು, ಒಟ್ಟು ಸಾಲಕ್ಕೆ ಹೋಲಿಸಿದಾಗ ಶೇ. 1.32 ಆಗಿದೆ. ಆಸ್ತಿ ಜವಾಬ್ದಾರಿ ತಃಖ್ತೆಯಲ್ಲಿ ರೂ. 2,26,05,752 ಕಾದಿರಿಸ ಲಾಗಿದೆ. ಸಂಘದ ಒಟ್ಟು ದುಡಿಯುವ ಬಂಡವಾಳವು ರೂ. 59.45 ಕೋಟಿಗಳಾಗಿದ್ದು, ನಿರ್ವಹಣಾ ವೆಚ್ಚ ರೂ. 35.45 ಲಕ್ಷಗಳಾಗಿದ್ದು, ದುಡಿಯುವ ಬಂಡವಾಳಕ್ಕೆ ಹೋಲಿಸಿದಾಗ ಶೇ. 1.04 ಆಗಿರುತ್ತದೆ. ಹಾಗೂ ಸಂಘದ ದುಡಿಯುವ ಬಂಡವಾಳದ ವಿವಿಧ ಬಾಪ್ತುಗಳಿಂದ ಗಳಿಸಿದ ಉತ್ಪನ್ನ ಶೇ. 9.76 ಮತ್ತು ಬಂಡವಾಳ ವೆಚ್ಚ ಶೇ. 5.12 ಆಗಿದ್ದು, ಸಂಘದ ಒಟ್ಟು ನಿವ್ವಳ ಮಾರ್ಜಿನ್ ಶೇ. 2.51 ಆಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದ ಪ್ರಕಾರ ಬಂಡವಾಳದ ಸಾಮಥ್ರ್ಯದ ಪ್ರಮಾಣವು ಶೇ. 9ಕ್ಕೆ ಮೇಲ್ಪಟ್ಟು ಇರಬೇಕಾಗಿದ್ದು, ಸಂಘದ ದಿನಾಂಕ 31.03.2020 ಅಂತ್ಯಕ್ಕೆ ಶೇ. 15.10 ರಷ್ಟಿದ್ದು, ಸಂಘವು ಉತ್ತಮವಾದ ಸ್ವ-ಸಾಮಥ್ರ್ಯವನ್ನು ಹೊಂದಿರುತ್ತದೆ.
ಸಂಸ್ಥೆಯು ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಸದಸ್ಯರ ಹಿತವನ್ನು ಗಮನದಲ್ಲಿಟ್ಟುಕೊಂಡು ಇತರ ಸಂಘ ಸಂಸ್ಥೆಗಳು ಮುಚ್ಚಿದ ಸಮಯದಲ್ಲಿಯೂ ಸಹ ನಮ್ಮ ಸಂಘವು ತೆರೆದು ರೂ. 228 ಕೋಟಿ ವ್ಯವಹಾರ ನಡೆಸಿದ್ದು, ಸಂಘದ ದುಡಿಯುವ ಬಂಡವಾಳವು ರೂ. 59.45 ಕೋಟಿಗಳಾಗಿದೆ. ನಮ್ಮ ಸಂಘವು ಆಡಿಟ್ ವರದಿಯಲ್ಲಿ ಸತತ ವಾಗಿ ಕಳೆದ 12 ವರ್ಷಗಳಿಂದಲೂ ‘ಎ’ ತರಗತಿಯಲ್ಲಿದೆ ಎಂದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಕೆ.ಎಂ ಸುಬ್ರಮಣಿ, ನಿರ್ದೇಶಕರಾದ ಜೆ.ಸಿ. ಮೋಹನ್, ಬಿ.ಸಿ. ಮಾದಯ್ಯ, ಸಿ.ಟಿ. ಗಣಪತಿ, ಕೆ.ಪಿ. ದೇವಯ್ಯ, ಕೆ.ಎಸ್. ಗಣಪತಿ, ವಿ.ಬಿ. ಕಿರಣ್, ಶೋಬಿತ್, ಗಣೇಶ್, ಗಪ್ಪು, ಜೆ.ಎ. ಸೌಮ್ಯ ಮತ್ತು ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿ.ಕೆ. ಪ್ರತಾಪ್ ಉಪಸ್ಥಿತರಿದ್ದರು.