ಸುಂಟಿಕೊಪ್ಪ, ಡಿ. 22: ಕ್ರಿಸ್ಮಸ್ ಹಬ್ಬದ ಅಂಗವಾಗಿ ಸಂತ ಅಂತೋಣಿ ದೇವಾಲಯವನ್ನು ವಿದ್ಯುತ್ ದೀಪ ಹಾಗೂ ನಕ್ಷತ್ರಗಳಿಂದ ಅಲಂಕರಿಸಿ ಗೋದಲಿಯನ್ನು ನಿರ್ಮಿಸಿ ಅಣಿಗೊಳಿಸಲಾಗಿದೆ. ಈ ಬಾರಿ ಕೊರೊನಾ ಮಹಾಮಾರಿಯಿಂದ ಹಬ್ಬದ ಸಡಗರ ಕುಂದಿದ್ದರೂ ಪ್ರಾರ್ಥನಾ ಸ್ಥಳವಾದ ದೇವಾಲಯವನ್ನು ಅಲಂಕಾರಗೊಳಿಸಲಾಗಿದೆ.