ಗೋಣಿಕೊಪ್ಪಲು, ಡಿ. 22: ಅಮ್ಮತ್ತಿನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನ ಸಹಕಾರ ಸಂಘದ 2019-20ನೇ ವಾರ್ಷಿಕ ಮಹಾಸಭೆಯು ಸಂಘದ ಸಭಾಂಗಣದಲ್ಲಿ ನಡೆಯಿತು. ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಮೊಳ್ಳೆರ ಪಿ. ಪೂಣಚ್ಚ ಸಂಘದ ಬೆಳವಣಿಗೆಗೆ ಹಿರಿಯರು ಶ್ರಮಿಸಿದ್ದಾರೆ. ಸಂಘವು ಪ್ರಸ್ತುತ 12.73 ಲಕ್ಷ ಲಾಭಾಂಶದಲ್ಲಿದ್ದು ರೈತರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದರು. ಸಂಸ್ಥೆಯ ಆವರಣದಲ್ಲಿ ರೈತರ ಅನುಕೂಲಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ವಿಶೇಷ ಆಸಕ್ತಿ ವಹಿಸಿ ಎರಡು ಗೋದಾಮುಗಳನ್ನು ನಿರ್ಮಿಸಲು ಸಹಕರಿಸಿದ ಸಂಸ್ಥೆಯ ಸದಸ್ಯರಾದ ಮಾಚಿಮಂಡ ಸುವಿನ್ ಗಣಪತಿ ಹಾಗೂ ಮಾಚಿಮಂಡ ಬಿ. ವಸಂತ್ ಅವರುಗಳನ್ನು ಮಹಾಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ನಿರ್ದೇಶಕ ಬೋಸ್ ದೇವಯ್ಯ ಮಾತನಾಡಿ, 50 ಲಕ್ಷ ಹಣವನ್ನು ಆರ್‍ಎಂಸಿ ಮೂಲಕ ವಿನಿಯೋಗಿಸಿ ಗೋದಾಮು ನಿರ್ಮಾಣವಾಗಿದೆ. ಇದರ ಪ್ರಯೋಜನ ಸಂಸ್ಥೆಯ ಸದಸ್ಯರು ಪಡೆÀದುಕೊಳ್ಳುವಂತೆ ತಿಳಿಸಿದರು 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಬಹುಮಾನ ನೀಡಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಎನ್.ಬಿ. ದೇವಯ್ಯ, ನಿರ್ದೇಶಕರಾದ ಎಂ.ಎಂ. ಮಾದಪ್ಪ, ಎಂ.ಎ. ದೇವಯ್ಯ, ಐ.ಕೆ. ಅಯ್ಯಣ್ಣ, ಯು.ಎ. ಖುಷಿ, ಕೆ.ಎ. ಪೊನ್ನಮ್ಮ, ಪಿ.ಎಸ್. ಬೋಪಯ್ಯ, ಬಿ.ಎಸ್. ಚಂದ್ರ ಹಾಗೂ ಹೆಚ್.ಕೆ. ನರಸಯ್ಯ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಪಿ.ಪಿ. ಪೂವಯ್ಯ ಸ್ವಾಗತಿಸಿ, ಉಪಾಧ್ಯಕ್ಷ ನೆಲ್ಲಮಕ್ಕಡ ಸಂಪತ್ ದೇವಯ್ಯ ವಂದಿಸಿದರು.