ಗೋಣಿಕೊಪ್ಪಲು, ಡಿ.22: ಗೋಣಿಕೊಪ್ಪಲುವಿನ ಶ್ರೀ ಉಮಾಮಹೇಶ್ವರಿ ದೇವಸ್ಥಾನ ಸಮಿತಿ ಆಶ್ರಯದಲ್ಲಿ ಕೋವಿಡ್ ನಿಯಮ ಪಾಲನೆಯೊಂದಿಗೆ ಸುಬ್ರಹ್ಮಣ್ಯ ಷಷ್ಠಿ ಆಚರಿಸಲಾಯಿತು. ಮುಂಜಾನೆ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಅಭಿಷೇಕ ಮಾಡುವ ಮೂಲಕ ಪೂಜಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಸರತಿ ಸಾಲಿನಲ್ಲಿ ಆಗಮಿಸಿದ ಭಕ್ತರು, ದೇವರ ದರ್ಶನ ಪಡೆದರು.ತುಲಾಭಾರ, ಹರಕೆ ಮುಡಿ, ಪುಷ್ಪಾರ್ಚನೆ ನಡೆದವು. ದೇವಸ್ಥಾನ ಸಮಿತಿಯ ಅಧ್ಯಕ್ಷ ನಿವೃತ್ತ ಮೇಜರ್ ಮನೆಯಪಂಡ ಬೋಪಣ್ಣ, ನಿರ್ದೇಶಕರಾದ ಜಪ್ಪೆಕೋಡಿ ರಾಜ, ಕೊಪ್ಪಿರ ಸನ್ನಿ, ಪ್ರಮೋದ್ ಗಣಪತಿ, ವಿ.ಟಿ.ವಾಸು, ಕಾಡ್ಯಮಾಡ ಚೇತನ್, ಜೆ.ಕೆ.ಸೋಮಣ್ಣ, ಶೋಬಿತ್, ವ್ಯವಸ್ಥಾಪಕ ಹೆಚ್.ಆರ್.ಮಧು ಸೇರಿದಂತೆ ಅನೇಕ ಸ್ವಯಂ ಸೇವಕರು ಭಾಗವಹಿಸಿದ್ದರು.