ಮಡಿಕೇರಿ, ಡಿ. 22 : ತಾಲೂಕಿನಾದ್ಯಂತ ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆಯಿತು.

ಬೆಳಗ್ಗೆ 7 ರಿಂದ 9 ಗಂಟೆಯ ತನಕ ಶೇ 14, 9 ರಿಂದ 11 ಗಂಟೆಯ ತನಕ ಶೇ 29.79, ಮಧ್ಯಾಹ್ನ 1 ಗಂಟೆಯೊಳಗೆ ಶೇ 48.74, 3 ಗಂಟೆಯೊಳಗೆ ಶೇ 62, 5 ಗಂಟೆಯೊಳಗೆ ಶೇ 77 ಮತದಾನವಾಯಿತು.

ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಕುಂಬಳದಾಳು, ಎಮ್ಮೆಮಾಡು ಗ್ರಾ.ಪಂ ಎಮ್ಮೆಮಾಡು-1, ಎಮ್ಮೆಮಾಡು-2 ಮತ್ತು ಸೋಮವಾರಪೇಟೆ ತಾಲೂಕಿನ ತೋಳೂರು ಶೆಟ್ಟಳ್ಳಿ ಗ್ರಾ.ಪಂ. ಕೂತಿ-2 ಕ್ಷೇತ್ರಗಳಲ್ಲಿ ನಾಮಪತ್ರ ಸ್ವೀಕೃತ ವಾಗದೆ ಚುನಾವಣೆ ನಡೆಯಲಿಲ್ಲ.

ಪ್ರತಿಯೊಂದು ಮತಗಟ್ಟೆಗೂ ಒಬ್ಬ ಅಧ್ಯಕ್ಷ ಅಧಿಕಾರಿ ಮತ್ತು ಮೂವರು ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಮಡಿಕೇರಿ ತಾಲೂಕಿಗೆ 160 ಪಿಆರ್‍ಒ, 160 ಎಪಿಆರ್‍ಒ, 320 ಪೋಲಿಂಗ್ ಅಧಿಕಾರಿಗಳು, ಸೋಮವಾರಪೇಟೆ ತಾಲೂಕಿಗೆ 250 ಪಿಆರ್‍ಒ, 250 ಎಪಿಆರ್‍ಒ, 500 ಪೋಲಿಂಗ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು.

ಕೊನೆ ಹಂತದಲ್ಲಿ ಅಭ್ಯರ್ಥಿಗಳು ಮತಗಟ್ಟೆಗೆ ಬರುವ ಮತದಾರರ ಬಳಿ ಮತಯಾಚಿಸುವ ದೃಶ್ಯಗಳು ಕಂಡುಬಂದವು.

ಐದಕ್ಕಿಂತ ಹೆಚ್ಚಿಗೆ ಜನ ಗುಂಪು ಸೇರುವುದು, ಸಂಚರಿಸುವುದು ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಎಲ್ಲಾ ಮತಗಟ್ಟೆಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಸ್ಥಳ ನಿರ್ಬಂಧಿತ ಪ್ರದೇಶವಾಗಿ ಘೋಷಿಸಲಾಗಿತ್ತು.

24 ಕೊರೊನಾ ಸೋಂಕಿತರಿಂದ ಮತದಾನ :

ಹೋಂ ಐಸೋಲೇಷನ್‍ನಲ್ಲಿರುವ ಕೋವಿಡ್-19 ಸೋಂಕಿತರು ಸಂಜೆ 4 ರಿಂದ 5 ಗಂಟೆಯೊಳಗೆ ಅವರ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಮತದಾನ ಮಾಡಿದರು. 2 ತಾಲೂಕಿನ 68 ಸೋಂಕಿತರ ಪೈಕಿ ಚುನಾವಣೆ ನಡೆಯುವ ವ್ಯಾಪ್ತಿಗೆ ಬರುವ 59 ಸೋಂಕಿತರಲ್ಲಿ 24 ಸೋಂಕಿತರು ಸೂಕ್ತ ಮುಂಜಾಗ್ರತಾ ಕ್ರಮದೊಂದಿಗೆ ಹಕ್ಕು ಚಲಾಯಿಸಿದರು.

ಮಡಿಕೇರಿ ತಾಲೂಕಿನ ನಾಪೋಕ್ಲುವಿನ 6, ಮೂರ್ನಾಡು 4, ಮರಗೋಡು, 7, ಕುಂದಚೇರಿ 4, ಅಯ್ಯಂಗೇರಿ 5, ನೆಲಜಿ, ಎಮ್ಮೆಮಾಡು, ಚೆಂಬುವಿನಲ್ಲಿ ತಲಾ 2, ಬೆಳಕುಮಾನಿ, ಅವಂದೂರು, ಕಾಟಕೇರಿ, ತಾಳತ್ಮನೆಯ ತಲಾ 1 ಸೋಂಕಿತರ ಪೈಕಿ 12 ಸೋಂಕಿತರು ಮತದಾನ ಮಾಡಿದರು.

ಸೋಮವಾರಪೇಟೆ ತಾಲೂಕಿನಲ್ಲಿ ಮತದಾನದ ಅರ್ಹತೆ ಪಡೆದಿದ್ದ 46 ಮಂದಿ ಕೊರೊನಾ ಸೋಂಕಿತರ ಪೈಕಿ 12 ಮಂದಿ ಮತದಾನ ಮಾಡಿದರು.

ತಾಲೂಕಿನ ಹೆಬ್ಬಾಲೆ, ಕೂಡುಮಂಗಳೂರು, ಹಂಡ್ಲಿ, ಕೊಡಗರಹಳ್ಳಿ, ಬಳಗುಂದ, ಸೂರ್ಲಬ್ಬಿ ಮತಗಟ್ಟೆಗಳಲ್ಲಿ ತಲಾ ಓರ್ವರು, ಚೆಟ್ಟಳ್ಳಿ ಸಮೀಪದ ಹೊರೂರು ಕ್ಷೇತ್ರದಲ್ಲಿ 6 ಮಂದಿ ಕೊರೊನಾ ಸೋಂಕಿತರು ಪಿಪಿಇ ಕಿಟ್‍ಗಳನ್ನು ಹಾಕಿಕೊಂಡು ಮತಗಟ್ಟೆಗೆ ಆಗಮಿಸಿ, ಮತದಾನ ಮಾಡಿದರು.

ಇವರಲ್ಲಿ ಕೆಲವರು ಸ್ವಂತ ವಾಹನದಲ್ಲಿ ಆಗಮಿಸಿದರೆ, ಇನ್ನು ಕೆಲವರು ಆರೋಗ್ಯ ಇಲಾಖೆ ವತಿಯಿಂದ ಒದಗಿಸಲಾಗಿದ್ದ ವಾಹನದಲ್ಲಿ ಆಗಮಿಸಿ, ಪಿಪಿಇ ಕಿಟ್ ಧರಿಸಿ ಮತದಾನದಲ್ಲಿ ಭಾಗವಹಿಸಿದ್ದರು.

ಸಂಜೆ 4 ಗಂಟೆಯಿಂದ 5 ಗಂಟೆಯವರೆಗೆ ಕೊರೊನಾ ಸೋಂಕಿತರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸೋಂಕಿತರೊಂದಿಗೆ ಆರೋಗ್ಯ ಕಾರ್ಯಕರ್ತರು ಪಿಪಿಇ ಕಿಟ್ ಬಳಸಿದ್ದರು.

ಈ ಸಂದರ್ಭ ಮತಗಟ್ಟೆಯ ಒಳಗೆ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ಫೇಸ್‍ಶೀಲ್ಡ್ ಮಾಸ್ಕ್, ಗ್ಲೌಸ್ ಧರಿಸಿ ಮತಪತ್ರಗಳನ್ನು ಒದಗಿಸಿದರು.

ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಆರೋಗ್ಯ ಇಲಾಖಾ ಸಿಬ್ಬಂದಿಗಳು ಕೋವಿಡ್ ಸೋಂಕಿತರು ಹಾಗೂ ಕೋವಿಡ್ ಶಂಕಿತರನ್ನು ಅಗತ್ಯ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ಸಂಬಂಧಪಟ್ಟ ಮತಗಟ್ಟೆಗಳಿಗೆ ಮತದಾನದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಕರೆತಂದು ಮತದಾನ ಮಾಡಿಸಿ, ಅವರನ್ನು ಮರಳಿ ಕರೆದುಕೊಂಡು ಹೋದರು. ಮತದಾನದ ನಂತರ ಆರೋಗ್ಯ ಇಲಾಖೆಯ ಮಾರ್ಗದರ್ಶನದಂತೆ ಪಿಪಿಇ ಕಿಟ್‍ಗಳನ್ನು ವಿಲೇವಾರಿ ಮಾಡಲಾಯಿತು.

ಮತಗಟ್ಟೆಗಳಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್ :

ಕೋವಿಡ್-19 ಪರಿಸ್ಥಿತಿ ಹಿನ್ನೆಲೆ ಪ್ರತಿ ಮತಗಟ್ಟೆಗಳಲ್ಲಿ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪ್ರತಿ ಮತದಾನ ಕೇಂದ್ರಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನೇಮಕ ಮಾಡಿ ಮತದಾನ ಕೊಠಡಿಗೆ ಆಗಮಿಸುವ ವಾಹನದಲ್ಲಿ ಆಗಮಿಸಿದರೆ, ಇನ್ನು ಕೆಲವರು ಆರೋಗ್ಯ ಇಲಾಖೆ ವತಿಯಿಂದ ಒದಗಿಸಲಾಗಿದ್ದ ವಾಹನದಲ್ಲಿ ಆಗಮಿಸಿ, ಪಿಪಿಇ ಕಿಟ್ ಧರಿಸಿ ಮತದಾನದಲ್ಲಿ ಭಾಗವಹಿಸಿದ್ದರು.

ಪ್ರತಿ ಮತದಾನ ಕೇಂದ್ರಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನೇಮಕ ಮಾಡಿ ಮತದಾನ ಕೊಠಡಿಗೆ ಆಗಮಿಸುವ ಅಧಿಕಾರಿಗಳು ಮತ್ತು ಮತದಾರರಿಗೆ ಉಷ್ಣಾಂಶ ತಪಾಸಣೆ ಹಾಗೂ ಒಳಪ್ರವೇಶಿಸುವ ವ್ಯಕ್ತಿಗಳು ಮಾಸ್ಕ್ ಧರಿಸಿರುವುದನ್ನು ಹಾಗೂ ಪ್ರತಿಯೊಬ್ಬರೂ ಸ್ಯಾನಿಟೈಸರ್ ಬಳಸಿ ಕೈ ಶುಚಿಗೊಳಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿತ್ತು.

ಕೋವಿಡ್ ಲಕ್ಷಣಗಳು ಕಂಡುಬಂದ ವ್ಯಕ್ತಿಗಳನ್ನು ಕೂಡಲೇ ಐಸೂಲೇಟ್ ಮಾಡಿ, ಹೆಚ್ಚಿನ ತಪಾಸಣೆಗೆ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಡುವ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಂಡಿತ್ತು. ಮತದಾನಕ್ಕೆ ನಿಗದಿಪಡಿಸಿದ ಕೊಠಡಿಯಲ್ಲಿ ಶೇ. 1 ಸೋಡಿಯಂ ಹೈಪೋಕ್ಲೋರೈಡ್ ದ್ರಾವಣವನ್ನು ಸಿಂಪಡಿಸಿ ಸಿದ್ಧಗೊಳಿಸಲಾಗಿತ್ತು.

ನಕ್ಸಲ್ ಪೀಡಿತ ಪ್ರದೇಶದಲ್ಲಿ ಬಂದೋಬಸ್ತ್, ಗಡಿಯಲ್ಲಿ ಕಟ್ಟೆಚ್ಚರ

ಮಡಿಕೇರಿ ತಾಲೂಕಿನ 8 ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ಸೂಕ್ತ ಬಂದೋಬಸ್ತ್ ವಹಿಸಲಾಗಿತ್ತು. ಶಸ್ತ್ರಸಜ್ಜಿತ ಸಿಬ್ಬಂದಿಗಳ ಕಣ್ಗಾವಲು ಮತಗಟ್ಟೆಯಲ್ಲಿತ್ತು.

ನಕ್ಸಲ್ ಪೀಡಿತ ಪ್ರದೇಶಗಳ ಮತಗಟ್ಟೆಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಭೇಟಿ ನೀಡಿದರು.

ಇದರೊಂದಿಗೆ ಕೊಡಗು-ಕೇರಳ ಗಡಿ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿತ್ತು. ಕೇರಳ ಮೂಲಕ ಜಿಲ್ಲೆ ಪ್ರವೇಶಿಸುವ ವಾಹನವನ್ನು ಸಂಪೂರ್ಣ ತಪಾಸಣೆ ನಡೆಸಲಾಯಿತು.

ಚುನಾವಣೆ ಹಿನ್ನಲೆಯಲ್ಲಿ ಕೇರಳ ರಾಜ್ಯದ 5 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಹೊಟೇಲ್ ಮುಂತಾದವುಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.

- ವರದಿ : ಹೆಚ್.ಜೆ ರಾಕೇಶ್, ಚಿತ್ರ : ಲಕ್ಷ್ಮೀಶ್