*ಗೋಣಿಕೊಪ್ಪಲು, ಡಿ. ೨೩: ಮುಂದಿನ ಐದು ವರ್ಷದ ಅವಧಿಯಲ್ಲಿ ನಿವೇಶನ ಖರೀದಿ, ನೂತನ ಕಟ್ಟಡ ಹಾಗೂ ಬ್ಯಾಂಕ್ ಸಿಬ್ಬಂದಿಗಳಿಗೆ ವಸತಿ ಗೃಹಗಳನ್ನು ನಿರ್ಮಿಸುವ ಯೋಜನೆ ಇದೆ ಎಂದು ‘ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ' ಅಧÀ್ಯಕ್ಷ ಕಿರಿಯಾಮಾಡ ಅರುಣ್ ಪೂಣಚ್ಚ ತಿಳಿಸಿದರು.
ಉಮಾಮಹೇಶ್ವರಿ ದೇವಾಲಯದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ೨೦೧೯-೨೦ರ ಸಾಲಿನಲ್ಲಿ ರೂ. ೩೩,೫೨,೫೭೬ ಲಾಭಗಳಿಸಿದೆ, ಪಿಗ್ಮಿ ಠೇವಣಿ, ಉಳುವರಿ ಠೇವಣಿ, ನಿರಖು ಠೇವಣಿ ಮತ್ತು ಇತ್ಯಾದಿ ಠೇವಣಿ ಮೂಲಕ ರೂ. ೧೩,೦೮,೮೪,೭೫೮ ಮೊತ್ತವನ್ನು ಸಂಗ್ರಹಿಸಲಾಗಿದೆ. ಎಂದರು.
ಸಂಘದಲ್ಲಿ ಒಟ್ಟು ೭೯೬ ಸದಸ್ಯರಿದ್ದು, ಸುಮಾರು ರೂ. ೪೧.೮೦ ಲಕ್ಷ ಸಂಗ್ರಹವಾಗಿದೆ. ಮುಂದಿನ ಸಾಲಿನಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶವೂ ಇದೆ. ಜಾಮೀನು ಸಾಲ, ಆಭರಣ ಸಾಲ, ದಿನವಹಿ ಸಾಲ, ಪಿಗ್ಮಿ ಒಡಿ ಸಾಲ, ನಗದು ಸಾಲ ಮತ್ತು ಇತರೆ ಸಾಲಗಳು ಸೇರಿ ಒಟ್ಟು ರೂ. ೧೨,೩೭,೯೬,೭೧೦ ಮೊತ್ತದ ಸಾಲ ವಿತರಿಸಲಾಗಿದೆ. ಚಿನ್ನಾಭರಣ ಮೇಲೆ ಗರಿಷ್ಠ ಸಾಲ ಸೌಲಭ್ಯ ನೀಡಲಾಗುತ್ತಿದೆ.
ಕೆಡಿಸಿಸಿ ಬ್ಯಾಂಕ್‌ನಲ್ಲಿ ಗೋಣಿಕೊಪ್ಪಲು, ವೀರಾಜಪೇಟೆ, ಸಿದ್ದಾಪುರ ಶಾಖೆ ಸೇರಿ ಒಟ್ಟಾರೆ ರೂ. ೨,೭೦,೫೮,೬೨೨ ನಿರಖು ಠೇವಣಿ ಇಡಲಾಗಿದ್ದು, ಪ್ರಸ್ತುತ ಶೇ. ೧೫ ರಷ್ಟು ಡಿವಿಡೆಂಡ್ ಘೋಷಣೆ ಮಾಡಲಾಗಿದೆ.
ಸಂಘದಲ್ಲಿ ಒಟ್ಟು ರೂ. ೫೬ ಲಕ್ಷ ಕಟ್ಟಡ ನಿಧಿಯಿದ್ದು, ಸ್ವಂತ ಕಟ್ಟಡದಿಂದ ಮಾಸಿಕ ರೂ. ೧೪,೫೦೦ ಬಾಡಿಗೆ
ಬರುತ್ತಿರುವದಾಗಿ ಹೇಳಿದರು. ವೀರಾಜಪೇಟೆ ತಾಲೂಕಿನಲ್ಲಿ ಸಂಘದ ೨೫ ಪಿಗ್ಮಿ ಏಜೆಂಟರಿದ್ದು ಗೋಣಿಕೊಪ್ಪಲು ಶಾಖೆ ರೂ. ೮೦ ಲಕ್ಷ, ವೀರಾಜಪೇಟೆ ಶಾಖೆ ರೂ. ೭೦ ಲಕ್ಷ ಹಾಗೂ ಶ್ರೀಮಂಗಲ ಶಾಖೆಯಲ್ಲಿ ಮಾಸಿಕ ರೂ. ೧೫ ಲಕ್ಷ ಪಿಗ್ಮಿ ಸಂಗ್ರಹವಾಗಿದೆ.
ನಿರಖು ಠೇವಣಿ ಮೇಲೆ ೧ ವರ್ಷಕ್ಕೆ ಶೇ. ರೂ. ೮, ೨ ವರ್ಷಕ್ಕೆ ಶೇ. ರೂ. ೮.೨೫ ಹಾಗೂ ೩ ವರ್ಷಕ್ಕೆ ಶೇ. ರೂ. ೮.೫೦ ಬಡ್ಡಿಯನ್ನು ಗ್ರಾಹಕರಿಗೆ ನೀಡಲಾಗುತ್ತಿದೆ ಎಂದರು.
ಪೊನ್ನAಪೇಟೆ ಮತ್ತು ಶ್ರೀಮಂಗಲದಲ್ಲಿ ಮುಂದೆ ಇ-ಸ್ಟಾಂಪಿAಗ್ ಸೌಲಭ್ಯ ಸಾರ್ವಜನಿಕರಿಗೆ ಸಿಗುವ ನಿಟ್ಟಿನಲ್ಲಿ ಸಂಘ ಪ್ರಯತ್ನ ನಡೆದಿದೆ ಎಂದರು.
ಗೋಣಿಕೊಪ್ಪ ಮುಖ್ಯ ಕಚೇರಿಯಲ್ಲಿ ಹೆಚ್ಚು ಪಿಗ್ಮಿ ಸಂಗ್ರಹಿಸಿದ ಎಂ.ಕೆ. ಅಜಯ್ ಕುಮಾರ್, ಜಿ.ಪಿ. ಸ್ವಾಮಿ, ಟಿ.ಜೆ. ಅಂತೋಣಿ, ವೀರಾಜಪೇಟೆಯ ಶಾಖೆಯ ಟಿ.ಎನ್. ರಂಜನ್, ಕೆ.ಪಿ. ಲವ, ಎಂ.ಎA. ಶಶಿಧರನ್ ಹಾಗೂ ಶ್ರಿಮಂಗಲ ಶಾಖೆಯ ಎಂ.ಕೆ. ತುಳಸಿ ಹಾಗೂ ಎಸ್.ಎಸ್.ಎಲ್.ಸಿ. ಅತ್ಯಧಿಕ ಅಂಕಗಳಿಸಿದ ಸಂಘದ ಸದಸ್ಯ ಪ್ರಶಾಂತ್ ಕಿರಣ್ ಅವರ ಪುತ್ರಿ ಎಂ.ಪಿ. ಪ್ರಹರ್ಶಿತ, ಕೆ.ಕೆ. ತಿಮ್ಮಯ್ಯ ಪುತ್ರಿ ಅಂಚನಾ ಪೂವಣ್ಣ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಎಸ್.ಎಸ್. ಮಾಚಯ್ಯ ಅವರ ಪುತ್ರಿ ಸಹನಾ ಮಾಚಯ್ಯ ಮತ್ತು ಕೆ.ಕೆ. ಸುನಿಲ್ ಅವರ ಪುತ್ರ ದ್ಯಾನ್ ಚಂಗಪ್ಪ ಅವರಿಗೆ ಪ್ರೋತ್ಸಾಹ ಬಹುಮಾನ ನೀಡಲಾಯಿತು.
ಸಂಘದ ಉಪಾಧ್ಯಕ್ಷ ಕಡೇಮಾಡ ಸುನಿಲ್ ಮಾದಪ್ಪ, ನಿರ್ದೇಶಕರುಗಳಾದ ಕಾಡ್ಯಮಾಡ ಗಿರೀಶ್ ಗಣಪತಿ, ಧ್ಯಾನ್ ಸುಬ್ಬಯ್ಯ, ಬಿ.ಎನ್. ಪ್ರಕಾಶ್, ಸುಮಿ ಸುಬ್ಬಯ್ಯ, ಎ.ಜೆ. ಬಾಬು, ಎಂ.ಕೆ. ದೇವಯ್ಯ, ಮುರುಗನ್, ಪಿ.ಜಿ. ರಾಜಶೇಖರ್, ಸಿ.ಡಿ. ಮಾದಪ್ಪ, ಎ.ಕೆ. ಉಮ್ಮರ್, ಕೆ.ಪಿ. ಪ್ರಶಾಂತ್‌ಕುಮಾರ್, ಪ್ರವಿ ಮೊಣ್ಣಪ್ಪ, ಪ್ರತಾಪ್ ಮತ್ತು ಕಾರ್ಯನಿರ್ವಾಹಣಾಧಿಕಾರಿ ಬಿ.ಇ. ಕಿರಣ್, ಲೆಕ್ಕಾಧಿಕಾರಿ ಬಿ.ಎ. ಹರೀಶ್ ಹಾಗೂ ಸಿಬ್ಬಂದಿಗಳು, ಪಿಗ್ಮಿ ಸಂಗ್ರಹಗಾರರು ಹಾಜರಿದ್ದರು.