ಮಡಿಕೇರಿ, ಡಿ. 22: ಕತ್ತಲೆಕಾಡು ಚಾಂಪಿಯನ್ಸ್ ಲೀಗ್ ಪ್ರಥಮ ವರ್ಷದ ಕ್ರಿಕೆಟ್ ಪಂದ್ಯಾವಳಿಯನ್ನು ಜನವರಿ 8 ರಿಂದ 10 ರವರೆಗೆ ಆಯೋಜಿಸಲಾಗಿದೆ ಎಂದು ಕೆಸಿಎಲ್ ಪಂದ್ಯಾವಳಿ ಸಮಿತಿ ತಿಳಿಸಿದೆ.

ಗ್ರಾಮದ ಯುವಕರಿಗೆ ಪೆÇ್ರೀತ್ಸಾಹ ನೀಡುವ ಉದ್ದೇಶದಿಂದ ಮೊದಲ ಬಾರಿಗೆ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಪಂದ್ಯಾವಳಿಯಲ್ಲಿ ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿ ಮತ್ತು ಇಬ್ನಿವಳವಾಡಿ, ಹುಲಿತಾಳ ಗ್ರಾಮದ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಒಟ್ಟು ಒಂಭತ್ತು ಫ್ರಾಂಚೈಸಿ ತಂಡಗಳು ಪಾಲ್ಗೊಳ್ಳುತ್ತಿರುವುದಾಗಿ ಪಂದ್ಯಾವಳಿ ಆಯೋಜನಾ ಸಮಿತಿ ಅಧ್ಯಕ್ಷ ಬಿ.ಎನ್. ರಾಜೇಶ್ ರೈ ಹಾಗೂ ಕಾರ್ಯದರ್ಶಿ ಮುಸ್ತಫಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ಆಟಗಾರರಿಂದ ಅರ್ಜಿ ಸ್ವೀಕೃತವಾಗಿದೆ. ಎಲ್ಲಾ ಆಟಗಾರರನ್ನು ಹರಾಜು ಪ್ರಕ್ರಿಯೆ ಮೂಲಕ ತಂಡಗಳು ಪಡೆದುಕೊಳ್ಳಲಿವೆ. ವಿಜೇತ ತಂಡಕ್ಕೆ ರೂ. 44,444, ರನ್ನರ್ ಅಪ್ ತಂಡಕ್ಕೆ ರೂ. 22,222, ತೃತೀಯ ಸ್ಥಾನ ಪಡೆದ ತಂಡಕ್ಕೆ ರೂ. 11,111 ನಗದು ಹಾಗೂ ಟ್ರೋಫಿ ನೀಡಲಾಗುವುದು. ಪ್ರತಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರನಿಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ನೀಡಿ ಪೆÇ್ರೀತ್ಸಾಹಿಸಲಾಗುವುದೆಂದು ಮಾಹಿತಿ ನೀಡಿದ್ದಾರೆ.