ಮಡಿಕೇರಿ, ಡಿ. 22: ಆಟೋ ಒಂದರಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದುದನ್ನು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸುವಲ್ಲಿ ಅಬಕಾರಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ವೀರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಅಬಕಾರಿ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಆಟೋರಿಕ್ಷಾ ವಾಹನ ಸಂಖ್ಯೆ (ಕೆಎ12 ಬಿ7151) ರಲ್ಲಿ ಅಕ್ರಮವಾಗಿ 8.640 ಲೀಟರ್ ಮದ್ಯವನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವಾಹನ ಮತ್ತು ಮದ್ಯದ ಒಟ್ಟು ಮೌಲ್ಯ ರೂ. 1,53,300 ಆಗಿದ್ದು, ಕಾರ್ಯಾಚರಣೆಯಲ್ಲಿ ಪ್ರಭಾರ ಅಧಿಕಾರಿ ಉಪ ಅಧೀಕ್ಷಕಿ ಭಾಗ್ಯ ಹಾಗೂ ರಕ್ಷಕರುಗಳಾದ ಗೋವಿಂದ ನಾಯ್ಕ ಪಿ., ಸುನಿಲ್ಕುಮಾರ್, ನಂದಗೋಕುಲ, ಗಂಗಾಧರ, ರಾಜೇಂದ್ರ ಭಾಗವಹಿಸಿದ್ದರು.