ಗೋಣಿಕೊಪ್ಪ ವರದಿ, ಡಿ. 22: ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ವತಿಯಿಂದ ತಾ. 28 ರಿಂದ ಬಾಲಕ, ಬಾಲಕಿಯರಿಗೆ ಹಾಕಿ ಟೂರ್ನಿ ಆಯೋಜಿಸಲಾಗಿದೆ.

15 ವಯೋಮಿತಿಯ ಒಳಗನ ಬಾಲಕ, ಬಾಲಕಿಯರಿಗೆ ಹಾಗೂ 19 ವಯೋಮಿತಿಯ ಕೆಳಗಿನ ಬಾಲಕರಿಗೆ ಕ್ರೀಡೆ ನಡೆಯಲಿದೆ. ಭಾಗವಹಿಸಲು ಇಚ್ಚಿಸುವ ಆಟಗಾರರು ನೇರವಾಗಿ ನೋಂದಣಿ ಮಾಡಿಕೊಳ್ಳಬಹು ದಾಗಿದೆ. ಹೆಚ್ಚಿನ ಮಾಹಿತಿಗೆ 9535546955 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.