“ಕೊಡವರು ಪೋರ್ಕ್ ತಿನ್ನುತ್ತಾರೆ ಎಂದು ಹೇಳಲು ಹೋಗಿ ಬಾಯಿ ತಪ್ಪಿನಿಂದ ಬೀಫ್ ಆಗಿದೆ” ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಯಿತಪ್ಪಿ ಬೀಫ್ ಎಂದು ಸಿದ್ದರಾಮಯ್ಯ ಅವರು ಹೇಳಿ ಬಿಟ್ಟಿದ್ದಾರೆ, ತಪ್ಪುಗಳು ಆಗುವುದು ಸಹಜ. ಅದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಬಹಿರಂಗ ಕ್ಷಮೆಯಾಚನೆಗೆ ಎಲ್ಲಾ ಕೊಡವರು ಕೇಳುತ್ತಿಲ್ಲ, ಗ್ರಾ.ಪಂ. ಚುನಾವಣೆಯನ್ನು ಗುರಿಯಾಗಿಸಿಕೊಂಡು ಕೆಲವರು ಕೇಳುತ್ತಿದ್ದಾರೆ ಅಷ್ಟೇ. ಈಗಾಗಲೇ ಸಿದ್ದರಾಮಯ್ಯ ಅವರು ವಿಷಾದ ವ್ಯಕ್ತಪಡಿಸಿ ಆಗಿದೆ ಎಂದು ಬ್ರಿಜೇಶ್ ಕಾಳಪ್ಪ ತಿಳಿಸಿದರು. ಬೋಪಯ್ಯ ಮಾತನಾಡಿ, ಕೊಡವರ ಮೇಲೆ ನಿರಂತರ ಅವಮಾನಿಸುವ ಹೇಳಿಕೆಗಳು ಬರುತ್ತಿವೆ. ಇದಕ್ಕೆ ಕಡಿವಾಣ ಹಾಕಲು ರಾಜಕೀಯ ರಹಿತವಾಗಿ ಕೊಡವರು ಒಂದಾಗಬೇಕು ಎಂದರು.

ಡಿಸಿ ಆಗಮನಕ್ಕೆ ಪಟ್ಟು

ಮನವಿ ಸ್ವೀಕರಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ರೂಪ ಅವರು ಬಂದ ವೇಳೆಯಲ್ಲಿ ಜಿಲ್ಲಾಧಿಕಾರಿ ಆಗಮಿಸಬೇಕೆಂದು ಪ್ರತಿಭಟನಾನಿರತರು ಪಟ್ಟು ಹಿಡಿದರು. ಇದರಿಂದ ಕೆಲಕಾಲ ಗೊಂದಲ ಸೃಷ್ಟಿಯಾಯಿತು. ಜಿಲ್ಲಾಧಿಕಾರಿ ಗ್ರಾ.ಪಂ ಚುನಾವಣೆ ಸಂಬಂಧ ಹೊರತೆರಳಿದಿದ್ದಾರೆ ಎಂದು ಅಧಿಕಾರಿ ರೂಪ ವಿವರಿಸಿದರು.

ಅಮ್ಮತ್ತಿ ಕೊಡವ ಸಮಾಜ ಅಧ್ಯಕ್ಷ ಬೋಸ್ ದೇವಯ್ಯ, ನಾಪೋಕ್ಲು ಕೊಡವ ಸಮಾಜದ ಉಪಾಧ್ಯಕ್ಷ ಎಂ. ಅಯ್ಯಪ್ಪ, ಪ್ರಮುಖರಾದ ಪಟ್ಟಡ ರೀನಾ ಪ್ರಕಾಶ್, ಪಟ್ರಪಂಡ ರಘು ನಾಣಯ್ಯ, ಪವನ್ ಪೆಮ್ಮಯ್ಯ, ಕುಕ್ಕೇರ ಜಯ ಚಿಣ್ಣಪ್ಪ, ಸುವಿನ್ ಗಣಪತಿ, ಕುಲ್ಲಚಂಡ ಪೊನ್ನಪ್ಪ, ಅನಿತಾ ಪೂವಯ್ಯ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.