ಕುಶಾಲನಗರ, ಡಿ. 21: ಕುಶಾಲನಗರ ಒಳಚರಂಡಿ ಕಾಮಗಾರಿ ಮುಂದಿನ 1 ವರ್ಷದ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈವರ್ಧನ್ ತಿಳಿಸಿದ್ದಾರೆ. ಕಾಮಗಾರಿಯ ಎರಡನೇ ಹಂತದ ಕೆಲಸ ನಡೆಯುತ್ತಿರುವ ಮುಳ್ಳುಸೋಗೆ ವ್ಯಾಪ್ತಿಯ ತಪೋವನ ಬಳಿ ಭೇಟಿ ನೀಡಿದ ಜೈವರ್ಧನ್ ರೂ. 18 ಕೋಟಿ ವೆಚ್ಚದಲ್ಲಿ ಮತ್ತೆ ಕಾಮಗಾರಿ ಪುನರಾರಂಭಗೊಂಡಿದೆ. ಬಾಕಿ ಉಳಿದಿರುವ ಕಾಮಗಾರಿ ಶೀಘ್ರಗತಿಯಲ್ಲಿ ನಡೆಯುತ್ತಿದ್ದು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
ಪಟ್ಟಣದಲ್ಲಿ ಹೆದ್ದಾರಿ ರಸ್ತೆ ಮೂಲಕ ಪೈಪ್ಗಳನ್ನು ಅಳವಡಿಸಲು ಸದ್ಯದಲ್ಲಿಯೇ ಕೆಲಸ ನಡೆಯಲಿದ್ದು ತದನಂತರ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುವುದು ಎಂದು ಮಾಹಿತಿ ನೀಡಿದ ಅವರು, 2021 ರ ಅಂತ್ಯದಲ್ಲಿ ಒಳಚರಂಡಿ ಯೋಜನೆ ಲೋಕಾರ್ಪಣೆಗೊಳ್ಳುವ ಆಶಯ ವ್ಯಕ್ತಪಡಿಸಿದರು.