ಗೋಣಿಕೊಪ್ಪ ವರದಿ, ಡಿ. 21 : ಮೈಸೂರು - ಗೋಣಿಕೊಪ್ಪ ಹೆದ್ದಾರಿಯ ದೇವರಪುರ ಗ್ರಾ. ಪಂ.ಗೆ ಒಳಪಡುವ ರಸ್ತೆ ಬದಿಯಲ್ಲಿ ಎಸೆದಿದ್ದ ತ್ಯಾಜ್ಯಗಳನ್ನು ಸ್ಥಳೀಯ ಕ್ಲೀನ್ ಕೂರ್ಗ್ ಇನಿಶೇಟೀವ್ ಸಂಘಟನೆ ಸದಸ್ಯರು ಇಂದು ಮುಂಜಾನೆ ಸ್ವಚ್ಛಗೊಳಿಸಿದರು. ಸುಮಾರು 850 ಮೀಟರ್ ದೂರದವರೆಗೆ ಕೊಳೆತ ಹಣ್ಣು, ತರಕಾರಿಯನ್ನು ಬಿಸಾಡಲಾಗಿತ್ತು. ತ್ಯಾಜ್ಯಗಳನ್ನು ಬೇರ್ಪಡಿಸಿ ಸುಮಾರು 10 ಚೀಲಗಳಷ್ಟು ತ್ಯಾಜ್ಯವನ್ನು ಕಸ ವಿಲೇವಾರಿ ಘಟಕಕ್ಕೆ ಸಾಗಿಸಲಾಯಿತು. ಹೆದ್ದಾರಿ ಬದಿ ಸ್ವಚ್ಛಗೊಳಿಸಿದ ಇವರ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಯಿತು.