ಸೋಮವಾರಪೇಟೆ, ಡಿ. 21: ಮಾರುತಿ ವ್ಯಾನ್‍ನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಮಡಿಕೇರಿ ಅಬಕಾರಿ ಇಲಾಖಾ ಅಧಿಕಾರಿಗಳು, ವಾಹನ ಸಹಿತ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಮೂರ್ನಾಡು ಗ್ರಾಮದ ನಿವಾಸಿ ಎಂ.ಎಸ್. ವಾಸು ಎಂಬಾತ ತನ್ನ ಮಾರುತಿ ಓಮ್ನಿ ವ್ಯಾನಿನಲ್ಲಿ ಅಕ್ರಮವಾಗಿ 8.640ಲೀಟರ್ ಮದ್ಯವನ್ನು ಸಾಗಾಟ ಗೊಳಿಸುತ್ತಿದ್ದ ಸಂದರ್ಭ, ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಮದ್ಯವನ್ನು ವಶಪಡಿಸಿಕೊಂಡು ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮಡಿಕೇರಿ ಅಬಕಾರಿ ವಲಯ ಕಚೇರಿಯ ಉಪ ನಿರೀಕ್ಷಕ ಬಿ.ಎಸ್. ಲೋಕೇಶ್, ಸಿಬ್ಬಂದಿಗಳಾದ ಕೆ.ಎಸ್. ಅಮ್ಜದ್, ಹೆಚ್.ಎ. ರಾಜು, ಕೆ.ಪಿ. ಸರಿತ ಹಾಗೂ ಎಸ್. ಲಕ್ಷ್ಮೀದೇವಿ ಪಾಲ್ಗೊಂಡಿದ್ದರು.