ಸೋಮವಾರಪೇಟೆ, ಡಿ. 21: ಪಟ್ಟಣದಿಂದ ಐಗೂರು ಕಡೆಗೆ ಸಂಚರಿಸುತ್ತಿದ್ದ ಮಾರುತಿ ವ್ಯಾನ್ ಅವಘಡಕ್ಕೀಡಾಗಿ ಚಾಲಕ ಅಪಾಯದಿಂದ ಪಾರಾಗಿರುವ ಘಟನೆ ಸಮೀಪದ ಕುಸುಬೂರು ಕೆರೆ-ಕೋವರ್‍ಕೊಲ್ಲಿ ಜಂಕ್ಷನ್ ನಡುವೆ ಸಂಭವಿಸಿದೆ.

ಇಂದು ಬೆಳಿಗ್ಗೆ ಯಡವಾರೆ ಗ್ರಾಮ ನಿವಾಸಿ ಮಧುಕುಮಾರ್ ಎಂಬವರು ಪಟ್ಟಣಕ್ಕೆ ಆಗಮಿಸಿ ಸಂತೆ ಮುಗಿಸಿಕೊಂಡು ವಾಪಸ್ ತೆರಳುತ್ತಿದ್ದ ಸಂದರ್ಭ ಕಾರಿನ ಎರಡು ಟಯರ್‍ಗಳು ಪಂಕ್ಚರ್ ಆಗಿದ್ದು, ರಸ್ತೆ ಬದಿ ಜೋಡಿಸಿಟ್ಟಿದ್ದ ಟಿಂಬರ್ ಮರಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ.

ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿದ್ದು, ಚಾಲಕ ಮಧುಕುಮಾರ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸ್ ಪೇದೆ ಶಿವಕುಮಾರ್ ತೆರಳಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.