ಮಡಿಕೇರಿ, ಡಿ. 21: ಕನೆಕ್ಟಿಂಗ್ ಕೊಡವಾಸ್ ಸಂಘಟನೆಯ ವತಿಯಿಂದ ಕೊಡವ ಆಚಾರ-ವಿಚಾರ, ಪದ್ಧತಿ, ಪರಂಪರೆ ಮತ್ತಿತರ ವಿಚಾರಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಕೊಡವ ಸಾಂಸ್ಕøತಿಕ ನಮ್ಮೆ ಕೋಯಿಮೆ-2021 ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜನಾಂಗದ ಎಲ್ಲರನ್ನೂ ಒಂದೇ ವೇದಿಕೆಯಡಿ ಸೇರಿಸುವ ಉದ್ದೇಶದೊಂದಿಗೆ ಮುಂದಿನ ಜನವರಿ 16 ಹಾಗೂ 17 ರಂದು ಕಿಗ್ಗಟ್ಟು ನಾಡುವಿನ ಪೊನ್ನಂಪೇಟೆ ಚಿಕ್ಕಮುಂಡೂರಿನಲ್ಲಿರುವ ಅಪ್ಪಚ್ಚಕವಿ ವಿದ್ಯಾಲಯದಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ವಿವಿಧ ಬಗೆಯ ಸಾಂಸ್ಕøತಿಕತೆಯೊಂದಿಗೆ ಕೊಡವ ವಿಚಾರಕ್ಕೆ ಸಂಬಂಧಿಸಿ ರುವ ಮೂಲ ಪದ್ಧತಿ-ಸಂಸ್ಕøತಿಯನ್ನು ಮತ್ತಷ್ಟು ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದೆಷ್ಟೋ ಮೂಲ ಪದ್ಧತಿಗಳು ಇದೀಗ ಕಣ್ಮರೆಯಾದಂತಿದ್ದು, ಇದಕ್ಕೆ ಪುನರ್‍ಜೀವ ನೀಡುವ ಪ್ರಯತ್ನ ಇದಾಗಿದೆ. ಕೊಡವಾಮೆಯ ಬೆಳವಣಿಗೆಯ ನಿಟ್ಟಿನಲ್ಲಿ ಇದೊಂದು ಹೊಸತನದ ಪ್ರಯತ್ನವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪೈಪೋಟಿಯ ವಿವರ
ಯಾವುದೇ ಕೊಡವ ಸಮಾಜ, ಕೊಡವ ಕೇರಿ, ಸಂಘ-ಸಂಸ್ಥೆ, ಒಕ್ಕೂಟ, ಊರು, ಕುಟುಂಬ ಈ ರೀತಿಯಾಗಿ ಪ್ರತಿನಿಧಿಯಾಗಿ ಒಂದು ತಂಡÀ ರಚನೆ ಮಾಡಿ, ಕೇವಲ ಆ ತಂಡದ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸ ಬಹುದಾಗಿದೆ. ಎ ತಂಡ, ಬಿ ತಂಡ ಎಂಬದಕ್ಕೆ ಇಲ್ಲಿ ಅವಕಾಶವಿಲ್ಲ. ಒಂದು ಗುಂಪು ಅಥವಾ ತಂಡಕ್ಕೆ ಮಾತ್ರ ಭಾಗವಹಿಸುವ ಅರ್ಹತೆ ಇರಲಿದೆ. ಹೀಗೆ ನೋಂದಣಿಯಾದ ತಂಡ ಎಷ್ಟು ಪೈಪೋಟಿಯಲ್ಲಿ ಬೇಕಾದರೂ ಭಾಗವಹಿಸಬಹುದು. ತಂಡಗಳು ಡಿಸೆಂಬರ್ 31ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕಿದೆ.
ಈ ಹಿಂದೆ ದಿನ ಬಳಕೆಯಲ್ಲಿದ್ದ ವಸ್ತುಗಳ ಪ್ರದರ್ಶನ, ಊಟ-ತಿಂಡಿ, ಪಾನಿಮಂಡೆತುಣಿ ಮತ್ತಿತರ ವಸ್ತುಗಳ ಪ್ರದರ್ಶನವಿರುತ್ತದೆ. ಸ್ಪರ್ಧೆಗೆ ಪುರುಷರು ಹಾಗೂ ಮಹಿಳೆಯರ ತಂಡದಲ್ಲಿ 15 ವರ್ಷದೊಳಗಿನ ಹಾಗೂ 15 ವರ್ಷ ಮೇಲ್ಪಟ್ಟ ಎಂಬ ಎರಡು ಪ್ರತ್ಯೇಕವಿರುತ್ತದೆ. ಮಹಿಳಾ ವಿಭಾಗಕ್ಕೆ ಉಮ್ಮತ್ತಾಟ್, ಕೂಟ್‍ಆಟ್, ಕೊಡವತೀನಿ, ಪ್ರಶ್ನಾವಳಿ, ಆಂಜಿಎಡ್‍ತಿತ್ ನಟನೆ. ಪುರುಷರ ವಿಭಾಗಕ್ಕೆ ಬೊಳಕಾಟ್, ಕೋಲಾಟ್, ಬಾಳೋಪಾಟ್, ಕತ್ತಿಯಾಟ್, ಪರೆಯಕಳಿ, ತಾಲಿಪಾಟ್, ಸಂಮ್ಮಂದ ಅಡ್‍ಕುವೊ, ಕಪ್ಪೆಆಟ್ ನಂತಹ ಸ್ಪರ್ಧೆಗಳು ವಿವಿಧ ನಿಯಮಗಳಿಗೆ ಒಳಪಟ್ಟಿರುತ್ತವೆ.
ಮಹಿಳಾ ಹಾಗೂ ಪುರುಷ ಈ ಎರಡೂ ವಿಭಾಗಕ್ಕೆ ಕೊಡವ ಹಾಡು, ಹಳೆಯ ವಸ್ತು ಸಂಗ್ರಹ, ವಾಲಗತ್ತಾಟ್, ಕಥೆ, ಫೋಟೋ, ತೆಂಗೆಕನಿ, ಅಂಬುಬಿಲ್ಲ್, ಭಾಷಣ ಮತ್ತಿತರ ಸ್ಪರ್ಧೆಗಳು ಜರುಗಲಿವೆ. ಸ್ಪರ್ಧೆ ಮತ್ತಿತರ ವಿಚಾರಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಕ್ಕೆ ಚೋಕಂಡ ಸೂರಜ್ ಸೋಮಯ್ಯ (9902582230) ಶಾಂತೆಯಂಡ ನಿರನ್ ನಾಚಪ್ಪ (9611506319) ಹಾಗೂ ಚೇಂದಂಡ ಶಮ್ಮಿ ಮಾದಯ್ಯ (9945999366) ಇವರನ್ನು ಸಂಪರ್ಕಿಸಬಹುದಾಗಿದೆ.