ಮಡಿಕೇರಿ, ಡಿ. 20 : ಹಲವು ವರ್ಷಗಳಿಂದ ಹದಗೆಟ್ಟಿದ್ದ ನಗರದ ಸಾಯಿ ಮೈದಾನ ರಸ್ತೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಕ್ಯೂರಿಂಗ್ ಕಾರ್ಯ ನಡೆಯುತ್ತಿರುವ ಹಿನ್ನೆಲೆ ಸಾರ್ವಜನಿಕರ ವಾಹನ ಪ್ರವೇಶ ನಿರ್ಬಂಧಿಸಿದೆ. ಆದರೆ, ಸಿನಿಮಾ ವಾಹನಗಳು ಮಾತ್ರ ರಸ್ತೆಯಲ್ಲಿ ರಾಜಾರೋಷವಾಗಿ ಸಂಚರಿಸುತ್ತಿವೆ. ಸಾಯಿ ಮೈದಾನದಲ್ಲಿ ‘ಜರ್ಸಿ ನಂಬರ್ 10’ ಎಂಬ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಚಿತ್ರೀಕರಣ ಸ್ಥಳಕ್ಕೆ ತೆರಳಲು ಕ್ಯೂರಿಂಗ್ ಆಗುತ್ತಿರುವ ರಸ್ತೆ ಮೂಲಕವೇ ಸಾಗಬೇಕಾಗಿದೆ. ಆದರೆ, ಚಿತ್ರೀಕರಣಕ್ಕೆ ಬೇಕಾದ ವಾಹನ ಅಲ್ಲದೆ ಸಿನಿಮಾಕ್ಕೆ ಸಂಬಂಧಿಸಿದವರ ಕಾರ್, ಬೈಕ್‍ಗಳು ಕೂಡ ಈ ರಸ್ತೆಯಲ್ಲಿ ಓಡಾಡುತ್ತಿರುವ ದೃಶ್ಯಗಳು ಕಂಡು ಬಂದಿದೆ.

ಸಾರ್ವಜನಿಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ರಸ್ತೆ ಪೂರ್ಣಗೊಂಡು ಕನಿಷ್ಟ 15 ದಿನಗಳಾದರೂ ಕ್ಯೂರಿಂಗ್ ಕೆಲಸವಾಗಬೇಕು. ಆದರೆ, ವಾಹನಗಳು ಸಂಚರಿಸಿ ರಸ್ತೆ ಮತ್ತೆ ಹಾನಿಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.