ಪೊನ್ನಂಪೇಟೆ, ಡಿ. 20: ವೀರಾಜಪೇಟೆ, ಅಮ್ಮತ್ತಿ ರಸ್ತೆಯಲ್ಲಿ ನಿನ್ನೆ ಬೆಳಿಗ್ಗೆ ಮಾರುತಿ 800 ಕಾರ್ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ್ದು, ಸ್ಕೂಟರ್ ಸವಾರ ಅಮ್ಮತ್ತಿಯ ನಿವಾಸಿ ಬಿ.ಎಲ್. ಚಂದನ್ (30) ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತ ಪಟ್ಟಿದ್ದಾರೆ.
ಮೃತ ಚಂದನ್ ಗೋಣಿಕೊಪ್ಪಲು ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಗಣಿತ ಶಾಸ್ತ್ರ ಉಪನ್ಯಾಸಕರಾಗಿದ್ದರು. ನಿನ್ನೆ ಬೆಳಿಗ್ಗೆ ಅಮ್ಮತ್ತಿಯ ತನ್ನ ಮನೆಯಿಂದ ಚಂದನ್ ತನ್ನ ಸ್ಕೂಟರ್‍ನಲ್ಲಿ ವೀರಾಜಪೇಟೆಗೆ ತೆರಳುತಿದ್ದ ಸಂದÀರ್ಭ ಮಾರುತಿ 800 ಕಾರು ಹಿಂಬದಿಯಿಂದ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ನಜ್ಜು ಗುಜ್ಜಾಗಿದೆ. ಚಂದನ್ ರಸ್ತೆಗೆ ಬಿದ್ದು ಹೆಲ್ಮೆಟ್ ಸಹಿತ ತಲೆ ನೆಲಕ್ಕೆ ಬಡಿದ ಪರಿಣಾಮ ಸ್ಥಳದಲ್ಲೇ ಪ್ರಜ್ಞೆ ತಪ್ಪಿದ್ದಾರೆ.
ಕೂಡಲೇ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮೆದುಳಿನ ಭಾಗಕ್ಕೆ ತೀವ್ರ ಪೆಟ್ಟಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಚಂದನ್ ಮೃತ ಪಟ್ಟಿದ್ದಾರೆ. ವೀರಾಜಪೇಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.