ಕುಶಾಲನಗರ, ಡಿ. 20 : ಕುಶಾಲನಗರದ ಮಾವೇಲಿ ಸಹಕಾರ ಸಂಘದ ನೂತನ ಕಚೇರಿಯನ್ನು ಜಿಪಂ ಮಾಜಿ ಅಧ್ಯಕ್ಷ ವಿ.ಎಂ.ವಿಜಯ್ ಉದ್ಘಾಟಿಸಿದರು.
ಸಹಕಾರ ಸಂಘವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಜವಾಬ್ದಾರಿಯನ್ನು ಸಂಘದ ಪದಾಧಿಕಾರಿಗಳು ಪ್ರಾಮಾಣಿಕವಾಗಿ ನಿರ್ವಹಿಸಬೇಕಿದೆ ಎಂದು ತಿಳಿಸಿದ ವಿಜಯ್, ಹೆಚ್ಚಿನ ಸದಸ್ಯತ್ವದ ಮೂಲಕ ಠೇವಣಿಗಳನ್ನು ಸಂಗ್ರಹಿಸಿ ಸದಸ್ಯರಿಗೆ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಸದಸ್ಯರಿಗೆ ಸಂಘದ ಅಭಿವೃದ್ಧಿ ಮಾಡುವಂತೆ ಹೇಳಿದರು. ಇದೇ ಸಂದರ್ಭ ಅವರು ಸಂಘದಲ್ಲಿ ತಾನು ವೈಯಕ್ತಿಕವಾಗಿ 5 ಲಕ್ಷ ರೂಗಳ ಠೇವಣಿ ಇಡುವುದಾಗಿ ಘೋಷಿಸಿದರು.
ಮಾವೇಲಿ ಸಹಕಾರ ಸಂಘದ ಅಧ್ಯಕ್ಷ ಎ.ಕೆ.ವೇಣು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಸುಶೀಲಾ, ಕಾರ್ಯದರ್ಶಿ ಸವಿತಾ, ಕೇರಳ ಸಮಾಜದ ಅಧ್ಯಕ್ಷ ಕೆ.ಆರ್.ಶಿವಾನಂದನ್, ಉಪಾಧ್ಯಕ್ಷ ಎಂ.ಜಿ.ಪ್ರಕಾಶ್, ಕಾರ್ಯದರ್ಶಿ ಕೆ.ಜೆ.ರಾಬಿನ್, ಖಜಾಂಚಿ ಬಿ.ಸಿ.ಆನಂದ್, ಸಲಹಾ ಸಮಿತಿ ಅಧ್ಯಕ್ಷ ಪಿ.ರವೀಂದ್ರನ್ ಸೇರಿದಂತೆ ನಿರ್ದೇಶಕರುಗಳು, ಸದಸ್ಯರು ಇದ್ದರು.