ಕುಶಾಲನಗರ, ಡಿ 20 : ಕುಶಾಲನಗರ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಅಧಿಕಗೊಂಡಿದೆ. ಬಡಾವಣೆಗಳ ರಸ್ತೆಗಳಲ್ಲಿ ಬೀದಿ ನಾಯಿಗಳು ಗುಂಪಾಗಿ ಓಡಾಡುತ್ತಿದ್ದು ನಾಗರಿಕರಿಗೆ ಆತಂಕ ಉಂಟು ಮಾಡುತ್ತಿದೆ ಎಂದು ದೂರುಗಳು ಕೇಳಿಬಂದಿವೆ.
ಕುಶಾಲನಗರ ಮಾರುಕಟ್ಟೆ ರಸ್ತೆ, ಆದಿಶಂಕರಾಚಾರ್ಯ ಬಡಾವಣೆ ಸೇರಿದಂತೆ ಬಹುತೇಕ ಕಡೆ ಬೆಳಗಿನಿಂದ ರಾತ್ರಿ ತನಕ ಬೀದಿ ನಾಯಿಗಳು ರಸ್ತೆಯಲ್ಲಿ ಓಡಾಡುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ವಾಹನ ಸಂಚಾರಕ್ಕೆ ಕೂಡ ತೊಂದರೆ ಉಂಟಾಗುತ್ತಿದ್ದು ವಾಹನ ಅಪಘಾತ ಘಟನೆಗಳು ವರದಿಯಾಗಿವೆ. ಕೂಡಲೆ ಪಟ್ಟಣ ಪಂಚಾಯ್ತಿ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸ್ಥಳೀಯರಾದ ಬೋರೇಗೌಡ ಅವರು ಪತ್ರಿಕೆ ಮೂಲಕ ಕೋರಿದ್ದಾರೆ.