ಮಡಿಕೇರಿ, ಡಿ. 20: ಬಿಳಿಗೇರಿಯ ಶ್ರೀ ಅರ್ಧನಾರೀಶ್ವರ ದೇವಾಲಯದಲ್ಲಿ ಜ. 6 ರಿಂದ 8 ರವರೆಗೆ ಅಷ್ಟಬಂಧ ದ್ರವ್ಯಕಲಶೋತ್ಸವ ನಡೆಯಲಿದೆ.

ಜ. 6 ರಂದು ಸಂಜೆ 5 ಗಂಟೆಗೆ ತಂತ್ರಿಗಳ ಆಗಮನವಾಗಲಿದ್ದು, ನಂತರ ಮಹಾಸಂಕಲ್ಪ, ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ ಜರುಗಲಿದೆ.

ಜ. 7 ರಂದು ಬೆಳಿಗ್ಗೆ 7 ರಿಂದ ಗಣಪತಿ ಹೋಮ, ಬಿಂಬಶುದ್ಧಿ ಕಲಶ ಪೂಜೆ, ಬಿಂಬಶುದ್ಧಿ, ಕಲಶಾಭಿಷೇಕ, ಪ್ರೋಕ್ತ ಹೋಮ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ಹೋಮ ಕಲಶಾಭಿಷೇಕ ನಡೆಯಲಿದ್ದು, 12.30ಕ್ಕೆ ಮಧ್ಯಾಹ್ನದ ಪೂಜೆ, ಸಂಜೆ 6.30 ರಿಂದ ಕುಂಭೇಶ ಕರ್ಕರಿ ಕಲಶ ಪೂಜೆ, ಅದಿವಾಸ ಹೋಮ ಹಾಗೂ ದ್ರವ್ಯಕಲಶ ಪೂಜೆ, ಪರಿಕಲಶ ಪೂಜೆ, ಕಲಶಾದಿವಾಸ ನಡೆಯಲಿದೆ.

ಜ. 8 ರಂದು ಬೆಳಿಗ್ಗೆ 9.40 ರಿಂದ 10.24ರ ಕುಂಭಲಗ್ನದಲ್ಲಿ ಶ್ರೀ ದೇವರಿಗೆ ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ ದ್ರವ್ಯ ಕಲಶಾಭಿಷೇಕ ಜರುಗಲಿದ್ದು, ಬೆಳಿಗ್ಗೆ 7 ರಿಂದ ಗಣಪತಿ ಹೋಮ, ತತ್ವ ಹೋಮ, ತತ್ವ ಕಲಶ ಪೂಜೆ, ತತ್ವಕಲಶಾಭಿಷೇಕದ ನಂತರ 11.30ಕ್ಕೆ ಮಹಾಪೂಜೆ, ಶ್ರೀಭೂತ ಬಲಿ, ಬಲಿ ಉತ್ಸವ ಹಾಗೂ ರಾಜಾಂಗಣ ಪ್ರಸಾದ ಮಂತ್ರಾಕ್ಷತೆ ಜರುಗಲಿದೆ.

ಅಷ್ಟಬಂಧ ದ್ರವ್ಯಕಲಶೋತ್ಸವದ ಪ್ರಯುಕ್ತ ಭಕ್ತಾದಿಗಳಿಗೆ ಮೂರು ದಿನಗಳ ಕಾಲ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಅನ್ನದಾನ ನಡೆಯಲಿದೆ. ದೇವಾಲಯದ ಮುಖಮಂಟಪ ನಿರ್ಮಾಣ ಮತ್ತು ಹೊರಾಂಗಣದಲ್ಲಿ ನೆಲಹಾಸು ಹಾಕುವ ಕಾಮಗಾರಿ ಪ್ರಗತಿಯಲ್ಲಿದ್ದು, ಧನಸಹಾಯ ನೀಡಲಿಚ್ಛಿಸುವ ದಾನಿಗಳು ದೇವಾಲಯಕ್ಕೆ ತಲುಪಿಸುವಂತೆ ಆಡಳಿತ ಮಂಡಳಿ ತಿಳಿಸಿದೆ.

ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವಂತೆ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ 94484 22442 ಸಂಪರ್ಕಿಸಬಹುದಾಗಿದೆ.