ನಾಪೆÇೀಕ್ಲು, ಡಿ. 20: ಶೋಬುಕಾಯಿ ಶಿಟೊ-ರಿಯೊ ಕರಾಟೆ ಫೆಡರೇಶನ್ ಮೈಸೂರು ಇವರ ವತಿಯಿಂದ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಆನ್‍ಲೈನ್ ಚಾಂಪಿಯನ್ ಶಿಪ್‍ನಲ್ಲಿ ನಾಪೆÇೀಕ್ಲು ಸೇಕ್ರೆಡ್ ಹಾಟ್ರ್ಸ್ ಶಾಲೆಯ ಚೆಟ್ಟಿಯಾರಂಡ ದಿಲನ್ ತಿಮ್ಮಯ್ಯ ಮತ್ತು ಧೀರಜ್ ಕಾರ್ಯಪ್ಪ ಕಟಾ ವಿಭಾಗದಲ್ಲಿ ಎರಡು ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಇವರು ನ್ಯಾಷನಲ್ ರೆಫ್ರಿ ಸೆನ್ಸಾಯಿ ನಾಗೇಂದ್ರಪ್ಪ ಅವರ ಶಿಷ್ಯರಾಗಿದ್ದು, ನೆಲಜಿ ಗ್ರಾಮದ ಚೆಟ್ಟಿಯಾರಂಡ ಮನು ಮತ್ತು ಪವಿತಾ ದಂಪತಿಯರ ಪುತ್ರರಾಗಿದ್ದಾರೆ.