ಮಡಿಕೇರಿ, ಡಿ. 20: ಮಾಜಿ ಸಚಿವ ಬಿ.ಎ. ಜೀವಿಜಯ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದರಿಂದ ಪಕ್ಷದ ಬಲ ದುಪ್ಪಟ್ಟಾಗಿದೆ. ಇದನ್ನು ಸಹಿಸದ ಜೆಡಿಎಸ್ ಮುಖಂಡರು ಜೀವಿಜಯ ಅವರ ವಿರುದ್ಧ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ದು, ಇದನ್ನು ಖಂಡಿಸುವುದಾಗಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ. ಸುರೇಶ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ರಾಜಕಾರಣಿ ಮುಂದಿನ ಪೀಳಿಗೆಯ ರಾಜಕೀಯ ಭವಿಷ್ಯದ ಬಗ್ಗೆ ಚಿಂತನೆ ಮಾಡುವುದು ಸಾಮಾನ್ಯ. ಇದನ್ನೇ ನೆಪಮಾಡಿಕೊಂಡು ಹತಾಶ ಮನೋಭಾವದಿಂದ ಜೆಡಿಎಸ್ ಪ್ರಮುಖರು ಜೀವಿಜಯ ಅವರ ವಿರುದ್ಧ ಹೇಳಿಕೆಗಳನ್ನು ನೀಡುವುದನ್ನು ಕಾಂಗ್ರೆಸ್ ಸಹಿಸುವುದಿಲ್ಲವೆಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್, ಮಡಿಕೇರಿ ಸಂಘಟನಾ ಕಾರ್ಯದರ್ಶಿ ಮುನೀರ್ ಮಚಾರ್, ಪ್ರಮುಖರಾದ ಕಲೀಲ್ ಬಾಷ, ಎನ್.ಎಂ.ಸಾಜಿರ್ ಹಾಗೂ ಅಕೀಲ್ ಖಾನ್ ಉಪಸ್ಥಿತರಿದ್ದರು.