ಮಡಿಕೇರಿ, ಡಿ. 20 : ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನೆಲೆ ಮಡಿಕೇರಿ ಪೊಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿರುವ ಮತಗಟ್ಟೆಗಳ ಭದ್ರತೆಗೆ 308 ಪೊಲೀಸರನ್ನು ನಿಯೋಜಿಸಲಾಗಿದೆ.

ಮಡಿಕೇರಿ ಉಪವಿಭಾಗ ವ್ಯಾಪ್ತಿಯ ಸಾಮಾನ್ಯ ಮತಗಟ್ಟೆಗಳಿಗೆ 1 ಡಿವೈಎಸ್ಪಿ, 2 ಪ್ರೊಬೇಷನರಿ ಡಿವೈಎಸ್ಪಿ, 4 ವೃತ್ತ ನಿರೀಕ್ಷಕರು, 8 ಉಪ ನಿರೀಕ್ಷಕರು, 25 ಸಹಾಯಕ ನಿರೀಕ್ಷಕರು, 200 ಪೊಲೀಸ್ ಪೇದೆಗಳು, 60 ಗೃಹ ರಕ್ಷಕ ಸಿಬ್ಬಂದಿ. ನಕ್ಸಲ್ ಪೀಡಿತ ಪ್ರದೇಶಗಳಿಗೆ 8 ಸಶಸ್ತ್ರ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಈ ಸಂಬಂಧ ನಗರದ ಪೊಲೀಸ್ ಮೈದಾನದಲ್ಲಿ ನಿಯೋಜಿತ ಸಿಬ್ಬಂದಿಗಳಿಗೆ ಡಿವೈಎಸ್ಪಿ ದಿನೇಶ್ ಕುಮಾರ್ ಮಾರ್ಗದರ್ಶನ ಮಾಡಿದರು. ಮತದಾನ ಮುಗಿಯುವ ತನಕ ಯಾವುದೇ ಸಮಸ್ಯೆಗಳು ಎದುರಾಗಬಾರದು. ಮಸ್ಟರಿಂಗ್, ಡಿಮಸ್ಟರಿಂಗ್ ವೇಳೆಯಲ್ಲಿ ಎಚ್ಚರದಿಂದ ಕರ್ತವ್ಯ ನಿರ್ವಹಿಸಬೇಕು. ಹಿರಿಯ ಅಧಿಕಾರಿಗಳು ಗಸ್ತು ತಿರುಗಬೇಕು ಎಂದು ಸೂಚಿಸಿದರು. ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ, ದಿವಾಕರ್, ಮಡಿಕೇರಿ ನಗರ ಠಾಣಾಧಿಕಾರಿ ಟಿ.ಎಂ ಅಂತಿಮ, ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ಇದ್ದರು.