ಸೋಮವಾರಪೇಟೆ, ಡಿ.20: ತಾ. 22ರಂದು ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರಪೇಟೆ ತಾಲೂಕಿನ 447 ಸೈನಿಕರಿಗೆ ಅಂಚೆ ಮೂಲಕ ಮತಪತ್ರ ಕಳುಹಿಸುವ ಕಾರ್ಯ ಮುಗಿದಿದೆ.
ಇದರೊಂದಿಗೆ 363 ಮಂದಿ ಚುನಾವಣಾ ಕರ್ತವ್ಯ ನಿರತರಿಗೂ ಮತಪತ್ರಗಳನ್ನು ನೀಡಲು ಸಿದ್ಧತೆ ಪೂರ್ಣಗೊಂಡಿದೆ ಎಂದು ತಾಲೂಕು ಚುನಾವಣಾಧಿಕಾರಿ ಗೋವಿಂದರಾಜು ತಿಳಿಸಿದ್ದಾರೆ.
ತಾಲೂಕಿನ 40 ಗ್ರಾಮ ಪಂಚಾಯಿತಿಗಳ 483 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಆಯ್ಕೆಯಾಗಬೇಕಿದ್ದು, ಈಗಾಗಲೇ 19 ಸ್ಥಾನಗಳಲ್ಲಿ ಪ್ರತಿಸ್ಪರ್ಧಿಗಳಿಲ್ಲದೇ ಇರುವದರಿಂದ ಅವಿರೋಧ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ. ಎರಡು ಸ್ಥಾನಗಳಲ್ಲಿ ಚುನಾವಣೆ ಬಹಿಷ್ಕಾರ ಇರುವದರಿಂದ 462 ಮಂದಿಯ ಆಯ್ಕೆಯಾಗಬೇಕಿದೆ.
ತಾಲೂಕಿನ 462 ಸ್ಥಾನಗಳಿಗೆ ಸಂಬಂಧಿಸಿದಂತೆ 1488 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಪಾರದರ್ಶಕವಾಗಿ ಚುನಾವಣೆ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ತಾಲೂಕಿನಲ್ಲಿ 1 ಸಾವಿರಕ್ಕಿಂತ ಹೆಚ್ಚಿನ ಮತದಾರರಿರುವ ಕ್ಷೇತ್ರದಲ್ಲಿ 2 ಮತಪೆಟ್ಟಿಗೆಗಳನ್ನು ಇಡಲು ಕ್ರಮ ಕೈಗೊಳ್ಳಲಾಗಿದೆ. ನೆಲ್ಲಿಹುದಿಕೇರಿಯ ಬೆಟ್ಟದಕಾಡು ಬೂತ್‍ನಲ್ಲಿ ಅತೀ ಹೆಚ್ಚು ಸಂಬಂಧಿಸಿದಂತೆ 1488 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಪಾರದರ್ಶಕವಾಗಿ ಚುನಾವಣೆ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ತಾಲೂಕಿನಲ್ಲಿ 1 ಸಾವಿರಕ್ಕಿಂತ ಹೆಚ್ಚಿನ ಮತದಾರರಿರುವ ಕ್ಷೇತ್ರದಲ್ಲಿ 2 ಮತಪೆಟ್ಟಿಗೆಗಳನ್ನು ಇಡಲು ಕ್ರಮ ಕೈಗೊಳ್ಳಲಾಗಿದೆ. ನೆಲ್ಲಿಹುದಿಕೇರಿಯ ಬೆಟ್ಟದಕಾಡು ಬೂತ್‍ನಲ್ಲಿ ಅತೀ ಹೆಚ್ಚು ಅಂದರೆ 1074 ಮತದಾರರು, ಮೂದರವಳ್ಳಿ ಮಧ್ಯಪಾಶ್ರ್ವ ಮತಗಟ್ಟೆಯಲ್ಲಿ ಅತೀ ಕಡಿಮೆ ಅಂದರೆ 149 ಮಂದಿ ಮತದಾರರಿದ್ದಾರೆ.
ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಉಪತಹಶೀಲ್ದಾರ್ ನೇತೃತ್ವದಲ್ಲಿ 6 ಹೋಬಳಿಗಳಲ್ಲಿ 6 ತಂಡಗಳನ್ನು ರಚಿಸಲಾಗಿದೆ. ತಾಲೂಕಿನಲ್ಲಿ 40 ಚುನಾವಣಾಧಿ ಕಾರಿಗಳು, 40 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಇದರೊಂದಿಗೆ 6 ಮಂದಿಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಪ್ರತಿ 10 ಗ್ರಾ.ಪಂ.ಗಳಿಗೆ ಒಬ್ಬರಂತೆ 4 ಮಂದಿಯನ್ನು ನೋಡಲ್ ಅಧಿಕಾರಿಗಳನ್ನಾಗಿ, 14 ಮಂದಿ ಯನ್ನು ಸೆಕ್ಟರ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ತಾಲೂಕಿನ 224 ಬೂತ್ ನಲ್ಲಿಯೂ ಆಶಾ ಕಾರ್ಯಕರ್ತೆಯರ ನೇಮಕ ಮಾಡಲಾಗಿದೆ. ಇವರುಗಳು ಕೋವಿಡ್ ಸಂಬಂಧಿತ ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ.
ತಾಲೂಕಿನಲ್ಲಿ 48 ಸೂಕ್ಷ್ಮ, 24 ಅತೀ ಸೂಕ್ಷ್ಮ ಹಾಗೂ 154 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ತಾಲೂಕಿನಲ್ಲಿ 72,889 ಪುರುಷರು, 74,922 ಮಹಿಳೆಯರು ಸೇರಿದಂತೆ ಒಟ್ಟು 1,47,811 ಮಂದಿ ಮತದಾನ ಮಾಡಲು ಅರ್ಹರಾಗಿದ್ದಾರೆ. ಪುರುಷರಿಗಿಂತ 2033 ಮಂದಿ ಮಹಿಳಾ ಮತದಾರರು ಅಧಿಕವಿದ್ದಾರೆ.- ವಿಜಯ್ ಹಾನಗಲ್