ಗೋಣಿಕೊಪ್ಪ ವರದಿ, ಡಿ. 20 : ಪಾಲಿಬೆಟ್ಟ ಚೆಷೈರ್ ಹೋಮ್ಸ್ ಇಂಡಿಯಾ ಕೂರ್ಗ್ ಅಧ್ಯಕ್ಷೆ ಗೀತಾ ಚೆಂಗಪ್ಪ ಅವರಿಗೆ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಕನ್ನಡ ವಿಕಾಸ ರತ್ನ ಪ್ರಶಸ್ತಿ ನೀಡಿ ಗೌರವಿಸಿತು.
ಮೈಸೂರು ಕರ್ನಾಟಕ ಕಲಾ ಮಂದಿರದಲ್ಲಿ ದಿ. ರಾಜಶೇಖರ್ ಕೋಟಿ ಮತ್ತು ಟಿ. ಎನ್. ದಾಸೇಗೌಡರ ಸ್ಮರಣಾರ್ಥ ಶನಿವಾರ ಆಯೋಜಿಸಿದ್ದ ಕನ್ನಡ ವಿಕಾಸ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಂಗವಿಲಕರ ಕ್ಷೇಮಾಭಿವೃದ್ಧಿಗೆ ಇವರು ನೀಡುತ್ತಿರುವ ಸೇವೆಯನ್ನು ಪರಿಗಣಿಸಿ ಗೌರವಿಸಲಾಯಿತು. ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಎಚ್. ಎಲ್. ಯಮುನಾ ಇತರರಿದ್ದರು.