ಮಡಿಕೇರಿ, ಡಿ. 20: ಮನೆ ಮನೆ ಕಾವ್ಯಗೋಷ್ಠಿ ಸಂವರ್ಧಕ ಪರಿಷತ್ತು ಸಮೂಹದ ಸೋದರ ಬಳಗ ಛಂದೋಬದ್ಧ ಕಾವ್ಯ ಸಂವರ್ಧಕ ಪರಿಷತ್ತು ಬಳಗದ 36ನೇ ಸ್ಪರ್ಧೆಯನ್ನು ಶೋಭಾ ಹರಿಪ್ರಸಾದ್ ಸೌದಿ ಅರೇಬಿಯಾ ಇವರ ಪ್ರಾಯೋಜಕತ್ವದಲ್ಲಿ ನಡೆಸಲಾಯಿತು. ಕುಸುಮ ಷಟ್ಪದಿಯಲ್ಲಿ ಬರೆಯುವ ಸ್ಪರ್ಧೆಯಲ್ಲಿ ನಲವತ್ತಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
ತೀರ್ಪುಗಾರರಾಗಿ ಅಮೃತ ಪಾಟೀಲ್ ಶ್ಯಾಡಲಗೇರಿ ಕಾರ್ಯ ನಿರ್ವಹಿಸಿದರು. ಪ್ರಥಮ ಬಹುಮಾನ ಅರ್ಚನಾ ಹೆಬ್ಬಾರ್, ದ್ವಿತೀಯ ಆಶಾಮಯ್ಯ ಪುತ್ತೂರು, ತೃತೀಯ ಮೇಧಿನಿ ಕೆಸವಿನಮನೆ ಮತ್ತು ಸಮಾಧಾನಕರ ಬಹುಮಾನ ಕಿಗ್ಗಾಲು ಗಿರೀಶ್ ಕೊಡಗು, ಶ್ಯಾಮ್ ಪ್ರಸಾದ್ ಭಟ್, ಪದ್ಮಾ ಆಚಾರ್ಯ, ಲತಾ ಆಚಾರ್ಯ ಬನಾರಿ, ಭಾಸ್ಕರ್ ನೆಲ್ಯಾಡಿ, ಸುಮ ಹೆಗಡೆ, ವಿಜಯಲಕ್ಷ್ಮಿ ಕಟೀಲು, ಶಂಕರ್ ಹರಟಿ, ಸುಬ್ರಮಣ್ಯ ಬರ್ವೆ, ಮಂಜುನಾಥ ಮರವಂತೆ ಪಡೆದುಕೊಂಡರು.