ಮಡಿಕೇರಿ, ಡಿ. 20: ನರಿಯಂದಡ ವ್ಯಾಪ್ತಿಯ ಕೋಕೇರಿ ಶ್ರೀ ಭಗವತಿ ದೇವಾಲಯದಲ್ಲಿ ನೀಲಿಯಾಟ್ ಸಾರ್ಥಾವು ಪ್ರಯುಕ್ತ ನಡೆದ “ಕೊಂಬಾಟ್ ನಮ್ಮೆ”ಗೆ ಶ್ರದ್ಧಾಭಕ್ತಿಯ ತೆರೆ ಬಿದ್ದಿದೆ. ಕಳೆದ ಮೂರು ವಾರಗಳಿಂದ ಆಚರಣೆಯಲ್ಲಿದ್ದ ಹಬ್ಬದ ಕಟ್ಟುಪಾಡುಗಳಿಗೆ ಎಂಟು ಕೊಡವ ಕುಟುಂಬಗಳು ಸೇರಿದಂತೆ ಗ್ರಾಮಸ್ಥರು ಸಾಕ್ಷಿಯಾದರು.