*ಗೋಣಿಕೊಪ್ಪಲು, ಡಿ. 19: ಕಿತ್ತಳೆ ಹಣ್ಣು ತುಂಬಿಸಿಕೊಂಡು ಮೈಸೂರಿನಿಂದ ಕೇರಳಕ್ಕೆ ತೆರಳುತ್ತಿದ್ದ (ಕೆ.ಎ.09 ಡಿ.5395) ಅಶೋಕ್ ಲೈಲಾಂಡ್ ಮಿನಿ ಲಾರಿಯೊಂದು ಚೆನ್ನಂಗೊಲ್ಲಿ ಬಳಿ ಮಗುಚಿ ಬಿದ್ದಿದೆ. ತಿತಿಮತಿ ಕಡೆಯಿಂದ ವೇಗವಾಗಿ ಬಂದ ಲಾರಿ ದೇವರಪುರದ ರಾಜೇಶ್ವರಿ ಶಾಲೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದೆ. ಚಾಲಕ ವಸೀಂಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿವೆ. ಗೋಣಿಕೊಪ್ಪಲು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.