ಮಡಿಕೇರಿ, ಡಿ. 19 : ವೀರಾಜಪೇಟೆ ತಾಲೂಕಿನ 35 ಗ್ರಾಮ ಪಂಚಾಯ್ತಿಗಳ 424 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಅಂತಿಮವಾಗಿ 905 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 4 ಸ್ಥಾನಗಳಿಗೆ ಉಮೇದುವಾರಿಕೆ ಸಲ್ಲಿಸದೆ ಖಾಲಿ ಇದೆ. 50

ಸ್ಥಾನಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ.

ಅನುಸೂಚಿತ ಜಾತಿ ಸಾಮಾನ್ಯ ಕ್ಷೇತ್ರಕ್ಕೆ 33, ಮಹಿಳಾ ಮೀಸಲು ಕ್ಷೇತ್ರಕ್ಕೆ 76, ಅನುಸೂಚಿತ ಪಂಗಡ ಸಾಮಾನ್ಯ ಕ್ಷೇತ್ರಕ್ಕೆ 69, ಮಹಿಳಾ ಕ್ಷೇತ್ರಕ್ಕೆ 93, ಹಿಂದುಳಿದ ವರ್ಗ (ಎ) ಸಾಮಾನ್ಯ ಕ್ಷೇತ್ರಕ್ಕೆ 29, ಮಹಿಳಾ ಮೀಸಲು ಕ್ಷೇತ್ರಕ್ಕೆ 68, ಹಿಂದುಳಿದ ವರ್ಗ (ಬಿ) ಮೀಸಲು ಕ್ಷೇತ್ರಕ್ಕೆ 22, ಮಹಿಳಾ ಮೀಸಲು ಕ್ಷೇತ್ರಕ್ಕೆ 4, ಸಾಮಾನ್ಯ ವರ್ಗದ ಸಾಮಾನ್ಯ ಕ್ಷೇತ್ರಕ್ಕೆ 337, ಮಹಿಳಾ ಕ್ಷೇತ್ರಕ್ಕೆ 174 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.