ಮಡಿಕೇರಿ, ಡಿ. 18: ಅರೆಭಾಷೆ ದಿನಾಚರಣೆ ಅಂಗವಾಗಿ ಬೆಂಗಳೂರಿನ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ವತಿಯಿಂದ ಲಗ್ಗೆರೆಯಲ್ಲಿರುವ "ನಮ್ಮನೆ ಸಾಂಸ್ಕøತಿಕ ಕಲಾ ಕೇಂದ್ರ"ದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಸಮಾಜದ ಅಧ್ಯಕ್ಷ ರಾಜೇಶ್ ತೇನನ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆ ಹಿನ್ನೆಲೆ ಹಾಗೂ ಭಾಷೆಯ ಬೆಳವಣಿಗೆಗೆ ಪೂರಕವಾದ ಅಂಶಗಳ ಬಗ್ಗೆ ಬೆಳಕು ಚೆಲ್ಲಿದರು.
ಅತಿಥಿಗಳಾದ ಪದ್ಮನಾಭ ಕೋಲ್ಚಾರ್ ಅರೆಭಾಷೆಯ ಹಾಗೂ ಅರೆಭಾಷಿಕ ಗೌಡರ ಸಂಸ್ಕøತಿ, ಸಾಹಿತ್ಯದ ವಿವಿಧ ಬೆಳವಣಿಗೆಗಳ ಬಗ್ಗೆ ಮನನ ಮಾಡಿದರು. ಭವಾನಿಶಂಕರ ಹೊದ್ದೇಟಿ ತಮ್ಮ ಸಾಹಿತ್ಯಾನು ಭವವನ್ನು ಹಂಚಿಕೊಂಡರಲ್ಲದೆ, ಹಲವು ಅರೆಭಾಷೆ ಚುಟುಕು ಹಾಗೂ ಹಾಡನ್ನು ಹಾಡಿ ಮನರಂಜಿಸಿದರು.
ಓಂಪ್ರಕಾಶ್ ಮದುವೆಗದ್ದೆ ಕಳೆದ ಮೂರು ದಶಕಗಳಿಂದ ಅಮೇರಿಕಾದ ಕ್ಯಾಲಿಫೆÇೀರ್ನಿಯಾದಲ್ಲಿ ನೆಲೆಸಿದ್ದರೂ, ಅರೆಭಾಷೆ ಮಾತನಾಡಿ, ಮುಂದಿನ ಪೀಳಿಗೆಗೆ ಭಾಷೆಯನ್ನು ಉಳಿಸಿ ಬೆಳೆಸಲು ಕರೆಕೊಟ್ಟರಲ್ಲದೆ, ತಮ್ಮ ಸಂಪೂರ್ಣ ಬೆಂಬಲ, ಸಹಕಾರ ಕೊಡುವುದಾಗಿ ಹೇಳಿದರು.
ಪೆÇನ್ನಪ್ಪ ಅಮ್ಮಾಜಿ ತಮ್ಮ ಬಾಲ್ಯದ ಘಟನೆಗಳಿಂದ ಹಿಡಿದು ಅರೆಭಾಷೆಯ ಮೊಟ್ಟಮೊದಲ ಟೇಪ್ ಕ್ಯಾಸೆಟ್ನಲ್ಲಿ ಹಾಡುಗಳ ಸರಮಾಲೆ "ಪೆÇನಿದ್ವನಿ" ಹಿನ್ನೆಲೆ ಹಾಗೂ ಅನುಭವ ಹಂಚಿಕೊಂಡರಲ್ಲದೆ ಅರೆಭಾಷೆಯ ಹಾಡನ್ನು ಸಭಿಕರ ಜೊತೆಯಲ್ಲಿ ಹಾಡಿ ಮನ ರಂಜಿಸಿದರು.
ಇನ್ನೂರಕ್ಕೂ ಅಧಿಕ ಬೆಂಗಳೂರಿನ ವಿವಿಧ ಭಾಗಗಳಲ್ಲಿ ನೆಲೆಸಿರುವ ಸಮಾಜ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷ ರವೀಂದ್ರನಾಥ್ ಕೇವಳ, ಜಂಟಿ ಕಾರ್ಯದರ್ಶಿ ಸೋಮಣ್ಣ ಕುಂಬಗೌಡನ, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ರವೀಂದ್ರನಾಥ್ ಕೇವಳ, ಯುವ ಘಟಕದ ಕಾರ್ಯದರ್ಶಿ ದಿಲೀಪ್ ಮೂಲೆಮಜಲು ಇದ್ದರು. ಭೂಮಿಕಾ ಉಳುವಾರು ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ರಾಜೇಶ್ ಅಂಬೆಕಲ್ಲು ನಿರೂಪಿಸಿದರು.