ಮಡಿಕೇರಿ, ಡಿ. 17: ಗ್ರಾಮಗಳು ಅಭಿವೃದ್ಧಿ ಸಾಧಿಸಬೇಕಾದರೆ ಗ್ರಾಮ ಪಂಚಾಯಿತಿ ಮೂಲ ಆಧಾರವಾ ಮಡಿಕೇರಿ, ಡಿ. 17: ಗ್ರಾಮಗಳು ಅಭಿವೃದ್ಧಿ ಸಾಧಿಸಬೇಕಾದರೆ ಗ್ರಾಮ ಪಂಚಾಯಿತಿ ಮೂಲ ಆಧಾರವಾ ಸಂಪಾಜೆಯ ಪಯಸ್ವಿನಿ ಸಹಕಾರ ಭವನದಲ್ಲಿ ನಡೆದ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಜನರ ನಿರೀಕ್ಷೆಗಳು ಗ್ರಾಮ ಮಟ್ಟದಲ್ಲಿ ಈಡೇರಬೇಕು. ಇದಕ್ಕೆ ಗ್ರಾ.ಪಂ. ಮೂಲ ಆಧಾರವಾಗಿದೆ. ಈ ನಿಟ್ಟಿನಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೋಟ್ಯಾಂತರ ರೂಪಾಯಿ ಅನುದಾನವನ್ನು ನೇರವಾಗಿ ಗ್ರಾ.ಪಂ.ಗೆ ನೀಡುತ್ತಿದೆ. (ಮೊದಲ ಪುಟದಿಂದ) ಇದರಿಂದ ಗ್ರಾಮಾ ಭಿವೃದ್ಧಿಯ ಕನಸು ನನಸಾಗುತ್ತಿದೆ. ಪಂಚಾಯಿತಿಗೆ ದೊಡ್ಡ ಮಟ್ಟದ ಅಧಿಕಾರದ ಜೊತೆಗೆ ಮಹತ್ವದ ಜವಾಬ್ದಾರಿ ಇದೆ. ಪ್ರಧಾನಿಗಳಿಗೆ ಇಲ್ಲದ ಅಧಿಕಾರ ಗ್ರಾ.ಪಂ. ಅಧ್ಯಕ್ಷರಿಗಿದೆ ಇದು ದುರ್ಬಳಕೆಯಾಗದೆ ಸಮರ್ಪಕವಾಗಿ ನಡೆದರೆ ಶೇ. 100 ಅಭಿವೃದ್ಧಿ ಸಾಧಿಸಬಹುದು. ಡಿಜಟಲೀಕರಣದ ಮೂಲಕ ಸಾರ್ವಜನಿಕರು ಮತ್ತು ಸರ್ಕಾರದ ನಡುವೆ ನೇರ ಸಂಬಂಧ ಸೃಷ್ಠಿಯಾಗಿದೆ. ಈ ನಿಟ್ಟಿನಲ್ಲಿ ಗ್ರಾ.ಪಂ. ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಗ್ರಾಮೀಣಾಭಿವೃದ್ಧಿಗೆ ಹೊಸ ಅರ್ಥ ನೀಡಬೇಕು ಎಂದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಹಣಕಾಸು ಆಯೋಗ ಜಿ.ಪಂ., ತಾ.ಪಂ.ಗೆ ಅನುದಾನ ಹಂಚಿದ ಬಳಿಕ ಉಳಿದ ಹಣವನ್ನು ಗ್ರಾ.ಪಂಗಳಿಗೆ ನೀಡುತ್ತಿತ್ತು. ಆದರೆ, ಇದೀಗ 14ನೇ ಹಣಕಾಸು ಆಯೋಗದ ಮೂಲಕ ನೇರವಾಗಿ ವಿವಿಧ ಮೂಲಗಳಿಂದ ಕೋಟ್ಯಂತರ ರೂಪಾಯಿ ಅನುದಾನವನ್ನು ಗ್ರಾ.ಪಂ.ಗೆ ನೀಡುತ್ತಿದೆ. ಕನಿಷ್ಟ ರೂ. 25 ರಿಂದ 30 ಲಕ್ಷ ಅನುದಾನ ವಾರ್ಷಿಕವಾಗಿ ಪಂಚಾಯಿತಿ ಕೈ ಸೇರುತ್ತಿದೆ. ವಿವಿಧ ವಸತಿ ಯೋಜನೆಗಳ ಮೂಲಕ ವಸತಿ ರಹಿತರಿಗೆ ಸೂರು ಕಲ್ಪಿಸಲಾಗುತ್ತಿದೆ. ಎಂದು ವಿವರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಚುನಾವಣೆ ಎದುರಿಸುವ ಶಕ್ತಿ ಕಾರ್ಯಕರ್ತರಿಗಿದೆ. ಸಂಪಾಜೆ, ಚೆಂಬು, ಕರಿಕೆ ಭಾಗದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದೆ. ಮುಂದಿನ ದಿನಗಳಲ್ಲಿ ಇದು ಮುಂದುವರೆಯಲಿದೆ. ಅತಿಯಾದ ವಿಶ್ವಾಸ ಬಿಟ್ಟು ಕೊನೆಯ ತನಕ ಪಕ್ಷಕ್ಕಾಗಿ ಕಾರ್ಯಕರ್ತರು ದುಡಿಯಬೇಕೆಂದು ಕರೆ ನೀಡಿದರು.

ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಸಮಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿ, ಗ್ರಾ.ಪಂ. ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕಾದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧಿಕಾರದ ಚುಕ್ಕಾಣಿ ಹಿಡಿಯಬೇಕು. ಗ್ರಾಮೀಣ ಪ್ರದೇಶದ ಜನರಿಗೆ ಸವಲತ್ತು ಸಿಗಬೇಕಾದರೆ ಗ್ರಾ.ಪಂ. ಆಡಳಿತ ಪಾರದರ್ಶಕತೆಯಲ್ಲಿರಬೇಕು. ಅಭಿವೃದ್ಧಿ ಪರ ಚಿಂತನೆಗಳನ್ನು ಅಭ್ಯರ್ಥಿಗಳು ಮೈಗೂಡಿಸಿಕೊಳ್ಳಬೇಕೆಂದರು. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿದರು.

ಸಭೆಯಲ್ಲಿ ಪಂಚಾಯಿತಿ ಚುನಾವಣಾ ಉಸ್ತುವಾರಿ ಭಾರತೀಶ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾದಪ್ಪ, ರವಿ ಕಾಳಪ್ಪ, ಜಿಲ್ಲಾ ವಕ್ತಾರ ಸುಬ್ರಹ್ಮಣ್ಯ ಉಪಾಧ್ಯಾಯ, ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ತಾ.ಪಂ. ಸದಸ್ಯ ನಾಗೇಶ್ ಕುಂದಲ್ಪಾಡಿ ಸೇರಿದಂತೆ ಇನ್ನಿತರರು ಇದ್ದರು.