ವೀರಾಜಪೇಟೆ, ಡಿ. 17:ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಪೊಲೀಸರು ಐವರು ಯುವಕರನ್ನು ಬಂಧಿಸಿ, ಬಂಧಿತರಿಂದ 1.4 ಕೆ.ಜಿ ತೂಕದ ಸುಮಾರು 50 ಸಾವಿರ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.ವೀರಾಜಪೇಟೆ ಸೆಲ್ವಾನಗರದ ಸಾಧಿಕ್, ಸುಭಾಷ್‍ನಗರದ ಅಬ್ದುಲ್ ಜಮೀಲ್, ಕಲ್ಲುಬಾಣೆಯ ಕಬೀರ್, ಮೀನುಪೇಟೆಯ ಮೇಲ್ವಿನ್ ಅಂತೋಣಿ ಹಾಗೂ ವಿಜಯನಗರದ ಇಮ್ರಾನ್ ಎಂಬವರುಗಳು ಗಾಂಜಾ ಮಾರಾಟದ ಆರೋಪದಡಿ ಬಂಧಿತ ಆರೋಪಿಗಳು. ಅಕ್ರಮ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಇಲ್ಲಿನ ನಗರ ಠಾಣೆಯ ಪೊಲೀಸರಿಗೆ ಮಾಹಿತಿ ಬಂದ ಮೇರೆಗೆ ಅಪರಾಧ ಪತ್ತೆ ದಳ ಹಾಗೂ ನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಬಂಧಿತ ರಿಂದ ಸುಮಾರು (ಮೊದಲ ಪುಟದಿಂದ) ಒಂದು ಲಕ್ಷ ಮೌಲ್ಯದ 1.487 ಕೆ.ಜಿ ತೂಕದ ಗಾಂಜಾ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಡಿವೈಎಸ್ಪಿ ಜಯಕುಮಾರ್ ನಿರ್ದೇೀಶನದಲ್ಲಿ, ಸಿಪಿಐ ಕ್ಯಾತೆಗೌಡ ಮಾರ್ಗದರ್ಶನÀದಲ್ಲಿ , ಅಪರಾಧ ಪತ್ತೆದಳದ ಎಸ್‍ಐ ಬೋಜಪ್ಪ ಹಾಗೂ ನಗರ ಠಾಣೆಯ ಎಸ್‍ಐ ಜಗದೀಶ್ ಧೂಳ್ ಶೆಟ್ಟಿ ಎಎಸ್‍ಐ ಸುಬ್ರಮಣಿ, ಫ್ರಾನ್ಸಿಸ್, ಸಿಬ್ಬಂದಿಗಳಾದ ಮನು, ವಿಶ್ವನಾಥ್, ರಂಜಿತ್, ರಾಮಪ್ಪ, ಗಿರೀಶ್, ಚಂದ್ರಶೇಖರ್, ಲೋಕೇಶ್, ಪೂವಯ್ಯ, ರಾಜೇಶ್, ಗಿರೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.