ಗುಡ್ಡೆಹೊಸೂರು, ಡಿ. 14: ಇಲ್ಲಿಗೆ ಸಮೀಪದ ಅತ್ತೂರಿನ ನಿವಾಸಿ ಕುರುಂಜಿ ವಿನು ಎಂಬವರ ಜಮೀನಿನಲ್ಲಿ ಹೆಬ್ಬಾವು ಪತ್ತೆಯಾಗಿತ್ತು. ಇದನ್ನು ಹೊಸಕೋಟೆಯ ಉರಗ ತಜ್ಞ ಸಾಜಿ ಎಂಬವರು ಆನೆಕಾಡು ವಿಭಾಗದ ರಕ್ಷಿತಾ ಅರಣ್ಯಕ್ಕೆ ಬಿಟ್ಟರು.

ಈ ಸಂದರ್ಭ ಈ ವಿಭಾಗದ ವನಪಾಲಕರಾದ ಅನಿಲ್ ಡಿಸೋಜಾ, ಸಿಬ್ಬಂದಿಗಳಾದ ತಿಮ್ಮಯ್ಯ, ಮಂಜು ಹಾಜರಿದ್ದರು.