ಶನಿವಾರಸಂತೆ, ಡಿ. 14: ಶನಿವಾರಸಂತೆ ಲಯನ್ಸ್ ಕ್ಲಬ್ ಆಫ್ ಕಾವೇರಿ ಸೆಂಟಿನಲ್ ವತಿಯಿಂದ ಲಯನ್ಸ್ ಕಚೇರಿ ಸಭಾಂಗಣದಲ್ಲಿ ವಿಶ್ವ ಭ್ರಷ್ಟಾಚಾರ ವಿರೋಧಿ ದಿನದ ಬಗ್ಗೆ ಸಭೆ ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷ ಬಿ.ಸಿ. ಧರ್ಮಪ್ಪ ವಹಿಸಿದ್ದರು.

ವಿಶ್ವ ಭ್ರಷ್ಟಾಚಾರ ವಿರೋಧಿ ದಿನದ ಬಗ್ಗೆ ಅತಿಥಿ ಉಪನ್ಯಾಸಕ ಚಂದ್ರಕಾಂತ್ ಅವರು ಮಾತನಾಡಿ, ಯಾವುದೇ ದೇಶದಲ್ಲಿ ಅಭಿವೃದ್ಧಿಯನ್ನು ಕಾಣಬೇಕಾದರೆ ಭ್ರಷ್ಟಾಚಾರ ಇರಬಾರದು. ಭ್ರಷ್ಟಾಚಾರ ಆರಂಭವಾಗುವುದೇ ರಾಜಕೀಯ ಕ್ಷೇತ್ರ ಹಾಗೂ ಕಾರ್ಯಾಂಗ ಕ್ಷೇತ್ರದಲ್ಲಿ ಇರುವವರೇ ಕಾರಣ.

ಯುವಕರು ತಮ್ಮ ವ್ಯಾಸಂಗದ ಸಂದರ್ಭದಲ್ಲಿ ಭ್ರಷ್ಟಾಚಾರ ವಿರೋಧವನ್ನು ಮೈಗೂಡಿಸಿ ಕೊಳ್ಳಬೇಕು. ಯಾಕೆಂದರೆ ಸಂಸ್ಕಾರ ಬರುವುದೇ ಮನೆ ಮತ್ತು ಶಾಲೆಗಳಿಂದ ಎಂದರು.

ವಕೀಲ ಲಯನ್ ಶಂಕರ್ ಮಾತನಾಡಿ, ಭ್ರಷ್ಟಾಚಾರದ ಬಗ್ಗೆ ಸಂವಿಧಾನದಲ್ಲಿ ಬರುವಂತ ಕಾಯಿದೆ ಕಾನೂನಿನ ವಿದಾನಗಳನ್ನು ವಿವರಿಸಿದರು. ಲಯನ್ಸ್ ಕ್ಲಬ್ ಖಜಾಂಚಿ ಬಿ.ಕೆ. ಚಿಣ್ಣಪ್ಪ ಮಾತನಾಡಿ, ನಮ್ಮಲ್ಲಿರುವ ಸದಸ್ಯರ ಕೊರತೆಗಳನ್ನು ನೀಗಿಸಲು ಹೊಸ ಹೊಸ ಸದಸ್ಯರನ್ನು ಸೇರಿಸುವಾಗ ಯುವಕರಿಗೆ ಆದ್ಯತೆ ಕೊಡುವಂತೆ ಕೋರಿದರು.

ಸಭೆಯಲ್ಲಿ ಉಪಾಧ್ಯಕ್ಷರುಗಳಾದ ಜಿ. ನಾರಾಯಣ ಸ್ವಾಮಿ, ಎನ್.ಕೆ. ಅಪ್ಪಸ್ವಾಮಿ, ಜಿ.ಬಿ. ಪರಮೇಶ್, ಮಾಜಿ ಅಧ್ಯಕ್ಷ ಎನ್.ಬಿ. ನಾಗಪ್ಪ, ಸದಸ್ಯರುಗಳಾದ ಸಿ.ಪಿ. ಹರೀಶ್, ಎಸ್.ಜಿ. ನರೇಶಚಂದ್ರ, ಜಿ.ಪಿ. ಪುಟ್ಟಪ್ಪ, ಕಾರ್ಯದರ್ಶಿ ಎಂ.ಆರ್. ನಿರಂಜನ್ ಇತರರು ಇದ್ದರು. ಎಂ.ಆರ್. ಮಲ್ಲೇಶ್ ಧ್ವಜವಂದನೆ ಮಾಡಿದರು. ಬಿ.ಕೆ. ಚಿಣ್ಣಪ್ಪ ಸ್ವಾಗತಿಸಿ, ಎಂ.ಆರ್. ನಿರಂಜನ್ ನಿರೂಪಿಸಿ, ಜಿ. ನಾರಾಯಣ ಸ್ವಾಮಿ ವಂದಿಸಿದರು.