ಶ್ರೀಮಂಗಲ, ಡಿ. 14 : ಬೆಂಗಳೂರಿನಲ್ಲಿ ನೆಲೆಸಿರುವ ಕೊಡಗಿನ ಬಿಟ್ಟಂಗಾಲ ಗ್ರಾಮದ ಮುಕ್ಕಾಟೀರ ಮ್ಯಾಕ್ ತಿಮ್ಮಯ್ಯ ಅವರನ್ನು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತದ ನಿರ್ದೇಶಕರನ್ನಾಗಿ ನೇಮಕ ಮಾಡಿ ಕರ್ನಾಟಕ ರಾಜ್ಯ ರಾಜ್ಯಪಾಲರ ಆದೇಶ ಅನುಸಾರ ಸರ್ಕಾರದ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಹೆಚ್.ವನಿತ ಅವರು ಆದೇಶ ಹೊರಡಿಸಿದ್ದಾರೆ.

ಮ್ಯಾಕ್ ತಿಮ್ಮಯ್ಯ ಅವರು ಕಳೆದ ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆಯಲ್ಲಿ ರಾಜ್ಯದ ಬಿಜೆಪಿ ಪಕ್ಷದ ಡಿಜಿಟಲ್ ಸ್ರ್ಟ್ಯಾಟಜಿ ವಿಭಾಗದ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ಹಿನ್ನೆಲೆ ಅವರನ್ನು ಈ ಹುದ್ದೆಗೆ ನೇಮಿಸಲಾಗಿದೆ. ಮ್ಯಾಕ್ ತಿಮ್ಮಯ್ಯ ಅವರು ಮುಕ್ಕಾಟೀರ ಸನ್ನಿ ಮುದ್ದಪ್ಪ ಮತ್ತು ಜಾನ್ಸಿ (ತಾಮನೆ ಶಾಂತೆಯಂಡ) ಪುತ್ರನಾಗಿದ್ದು, ಪತ್ನಿ ಕೃತಿಕ (ತಾಮನೆ ಕುಟ್ಟಂಡ) ಅವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.