ಆಲೂರು-ಸಿದ್ದಾಪುರ, ಡಿ. 12: ‘ಸಂಸ್ಕಾರವಂತ ಬದುಕಿನಿಂದ ಮಾತ್ರ ಜನಮಾನಸದಲ್ಲಿ ಉಳಿಯಲು ಸಾಧ್ಯವಿದೆ’ ಎಂದು ತುಮಕೂರು ಸಿದ್ಧಗಂಗಾ ಮಠಾದೀಶ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಆಲೂರು-ಸಿದ್ದಾಪುರದಲ್ಲಿ ಆಯೋಜಿಸಿದ್ದ ಶತಾಯುಷಿ ದಿ. ಸಿದ್ಧಮಲ್ಲಯ್ಯ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. ಒಬ್ಬ ವ್ಯಕ್ತಿ ಹೇಗೆ ಬದುಕಿದ ಎಂಬದು ಮುಖ್ಯವಾಗಿ ರುತ್ತದೆ. ಸಂಸ್ಕಾರವಂತ ಬದುಕಿನಿಂದ ಮಾತ್ರ ಜನರ ಮನಸಿನಲ್ಲಿ ಉಳಿಯಲು ಸಾಧ್ಯ ಎಂಬದಕ್ಕೆ ಶತಾಯುಷಿ ದಿ. ಸಿದ್ಧಮಲ್ಲಯ್ಯ ಅವರು ಸಾಕ್ಷಿಯಾಗಿ ದ್ದಾರೆ ಎಂದು ಶ್ಲಾಘಿಸಿದರು. ಇಂದು ಸಮಾಜ ಕಲುಷಿತಗೊಂಡಿದೆ. ಅದಕ್ಕೆ ಆಧ್ಯಾತ್ಮಿಕತೆಯ ಮೂಲಕ ಶುದ್ಧಿಗೊಳಿ ಸಬೇಕಾಗಿದೆ. ಮಠ-ಮಾನ್ಯಗಳು ದೇವಾಲಯಗಳಿಗೆ ಹೋಗುವ ಮೂಲಕ ಪ್ರಶಾಂತತೆ ಮತ್ತು ನೆಮ್ಮದಿ ಪಡೆಯಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಧ್ಯಮದ ವರೊಂದಿಗೆ ಮಾತನಾಡಿದ ಶ್ರೀಗಳು, ಮಠ-ಮಾನ್ಯಗಳನ್ನು ದುರ್ಬಲ ಗೊಳಿಸುವ ಹುನ್ನಾರ ಸಹಿಸಲು ಸಾಧ್ಯವಿಲ್ಲ. ನಮ್ಮ ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ ದಾಸೋಹ ಸೇವೆಯಲ್ಲಿ ಮಠಗಳು ತಮ್ಮನ್ನು ತೊಡಗಿಸಿ ಕೊಂಡಿವೆ. ಅಂತಹ ಮಠಗಳನ್ನು ಕೆಲವು ಅಧಿಕಾರಿಗಳು ದುರ್ಬಲಗೊಳಿ ಸಲು ಹೊರಟಿರುವುದು ದುರದೃಷ್ಟಕರ ಎಂದರು.

ಕೊಡಗು ಜಿಲ್ಲೆಯಲ್ಲಿ ರಾಜರ ಕಾಲದಿಂದಲೂ ಮಠಗಳಿದ್ದು, ಅವುಗಳಿಗೆ ಅಂದಿನ ರಾಜರ ಕೊಡುಗೆ ಅಪಾರವಾದದ್ದು. ಅಂದು ಜಿಲ್ಲೆಯಲ್ಲಿ 63 ಮಠಗಳಿದ್ದವು. ಆದರೆ ಇಂದು ಬೆರಳೆಣಿಕೆಯಷ್ಟು ಮಾತ್ರ ಮಠಗಳಿವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮಠಗಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕೇ ಹೊರತು ದುರ್ಬಲಗೊಳಿಸುವ ಕೆಲಸ ಮಾಡಬಾರದೆಂದರು. ಜಿಲ್ಲೆಯ ವೀರಾಜಪೇಟೆಯ ಅರಮೇರಿ ಕಳಂಚೇರಿ ಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಸಾಮಾಜಿಕ ಸೇವೆಯಲ್ಲಿ ಮುಂಚೂಣಿ ಯಲ್ಲಿರುವಾಗ ಹಿಂದಿನ ಜಿಲ್ಲಾಧಿಕಾರಿ ಯೊಬ್ಬರು ಮಠದ ಆಸ್ತಿ ಮತ್ತು ಜಾಗವನ್ನು ಸರಕಾರಿ ಜಾಗವೆಂದು ಬೇರೆ ಉದ್ದೇಶಕ್ಕೆ ನೀಡಿ ಆದೇಶಿಸಿದ್ದು ಕಾನೂನು ಬಾಹಿರವಾಗಿದೆ. ಈವರೆಗೂ ಮಠದ ಸುಪರ್ದಿಯಲ್ಲಿ ರುವ ಜಮೀನು ಸರಕಾರಿ ಆಸ್ತಿಯಾಗುವುದು ಹೇಗೆ ಎಂದು ಪ್ರಶ್ನಿಸಿದರು.

ಈ ಸಂದರ್ಭ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಅಮ್ಮತ್ತಿ ಕನ್ನಡ ಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ವಿವಿಧ ಮಠಾದೀಶರು, ರಾಜ್ಯ ಮಾಹಿತಿ ಆಯೋಗದ ನಿವೃತ್ತ ಆಯುಕ್ತ ಜೆ.ಎಸ್. ವಿರೂಪಾಕ್ಷಪ್ಪ, ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಶಿವಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ಗ್ರಾಮದ ಹಿರಿಯ ಮುಖ್ಯಸ್ಥ ಕೋಳಿಬೈಲು ಬೋಜಪ್ಪ, ಹಿರಿಯ ವಕೀಲ ಎನ್.ಸಿ. ಚನ್ನಬಸವಯ್ಯ ಮುಂತಾದವರಿದ್ದರು.