ಮಡಿಕೇರಿ, ಡಿ. 12: ಬೈಕ್ ಕಳವು ಪ್ರಕರಣ ವೊಂದಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ದ್ದಾರೆ. ಕೆ. ನಿಡುಗಣೆ ಗ್ರಾಮದ ನಂದಿಮೊಟ್ಟೆಯ ಪಿ.ಡಿ. ನವೀನ್ ಎಂಬವರು ಅಕ್ಟೋಬರ್ 18 ರಂದು ತಮ್ಮ ಯಮಹ ಮೋಟಾರ್ ಬೈಕ್ (ಕೆಎ 02 ಈಹೆಚ್ 3120)ನ್ನು ಅಬ್ಬಿಫಾಲ್ಸ್ ಬಳಿಯ ಆರ್.ಟಿ.ಓ. ಕಚೇರಿ ಸಮೀಪ ಕ್ಯಾಂಟಿನ್ ಮುಂಭಾಗ ನಿಲ್ಲಿಸಿ ಮನೆಗೆ ತೆರಳಿದ್ದು, ಮರುದಿನ ಬಂದಾಗ ಬೈಕ್ ಕಳುವಾಗಿತ್ತು. ಈ ಬಗ್ಗೆ ದೊರೆತ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಬೈಕ್ ಕಳವು ಮಾಡಿದ್ದ ಆರೋಪಿ ಆರ್.ಟಿ.ಓ. ಕಚೇರಿ ಬಳಿಯ ನಿವಾಸಿ ಎಂ.ಯು. ನಿಶ್ವತ್ ಅಲಿಯಾಸ್ ನಿಚ್ಚು (21) ಎಂಬಾತನನ್ನು ಬಂಧಿಸಿ ರೂ. 56 ಸಾವಿರ ಮೌಲ್ಯದ ಬೈಕನ್ನು ವಶಪಡಿಸಿ ಕೊಂಡಿದ್ದಾರೆ.ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಪಿ. ದಿನೇಶ್‍ಕುಮಾರ್ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತದ ನಿರೀಕ್ಷಕ ಸಿ.ಎನ್. ದಿವಾಕರ್ ನೇತೃತ್ವದಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಹೆಚ್.ವಿ. ಚಂದ್ರಶೇಖರ್, ಎಂ.ಕೆ. ಸದಾಶಿವ, ಸಿಬ್ಬಂದಿಗಳಾದ ರವಿಕುಮಾರ್, ಮಂಜುನಾಥ್, ಹೆಚ್.ಕೆ. ರಾಜೇಶ್, ಸೋಮಶೇಖರ್, ಸಜ್ಜನ್ ಇವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ತನಿಖಾ ತಂಡಕ್ಕೆ ಎಸ್‍ಪಿ ಬಹುಮಾನ ಘೋಷಿಸಿದ್ದಾರೆ.