ಮಡಿಕೇರಿ, ಡಿ. 12: ಔಷಧೀಯ ಸಸ್ಯಗಳು ಮಾನವನ ಆರೋಗ್ಯ ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸಿವೆ ಎಂದು ಅಗ್ರಿಕಲ್ಚರ್ ಸೈನ್ಸಸ್ ಪೋರಂ ಕೊಡಗು (ಎಎಸ್‍ಎಫ್‍ಕೆ) ಸಂಸ್ಥೆಯ ಅಧ್ಯP್ಷÀ ಪಿ.ಎಸ್. ಸುಬ್ರಮಣಿ ಅಭಿಪ್ರಾಯಪಟ್ಟರು.

ಪೊನ್ನಂಪೇಟೆಯ ಕೂರ್ಗ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ (ಸಿಐಟಿ) ಸಂಸ್ಥೆಯ ಆವರಣದಲ್ಲಿ ಎನ್.ಎಸ್.ಎಸ್ (ಎನ್‍ಎಸ್‍ಎಸ್) ಮತ್ತು ಇಕೋ ಕ್ಲಬ್ ವತಿಯಿಂದ ಜಂಟಿಯಾಗಿ ಸ್ಥಾಪಿಸಲಾದ ಔಷಧೀಯ ಸಸ್ಯವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯ ವರ್ಧಕ ಶಕ್ತಿ ಔಷಧೀಯ ಸಸ್ಯಗಳಿಗಿದೆ ಎಂದು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕಾಲೇಜ್ ಆಫ್ ಫಾರೆಸ್ಟ್ರಿಯ ಡೀನ್ ಡಾ.ಸಿ.ಜೆ.ಕುಶಾಲಪ್ಪ ಕೊಡಗಿನಲ್ಲಿ ಸಿಗುವ ಔಷಧೀಯ ಸಸ್ಯಗಳ ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ಅನೇಕ ಕಾರ್ಪೋರೇಟ್ ಸಂಸ್ಥೆಗಳು ಕೂಡ ಔಷಧೀಯ ಸಸ್ಯಗಳನ್ನು ಬಳಸಿ ವಿವಿಧ ಔಷಧಗಳ ಉತ್ಪಾದನೆಯಲ್ಲಿ ತೊಡಗಿಸಿ ಕೊಂಡಿರುವ ಬಗ್ಗೆ ವಿವರಿಸಿದರು. ಔಷಧೀಯ ಸಸ್ಯಗಳ ಬಳಕೆ ಮತ್ತು ನಿಯಮಿತ ಆಹಾರ ಸೇವನೆಯಿಂದ ಕೋವಿಡ್-19 ಸೋಂಕು ನಿಯಂತ್ರಣ ಸಾಧ್ಯವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಐಟಿ ಸಂಸ್ಥೆಯ ಅಧ್ಯಕ್ಷ ಸಿ.ಪಿ. ಬೆಳ್ಳಿಯಪ್ಪ, ಔಷಧೀಯ ಸಸ್ಯಗಳ ಗುಣ ಮತ್ತು ಅದರ ಶ್ರೇಷ್ಠತೆಯ ಬಗ್ಗೆ ತಿಳಿಸಿದರು.

ಸಿಐಟಿ ಸಂಸ್ಥೆಯ ಪ್ರಾಂಶುಪಾಲ ಡಾ. ಎಂ. ಬಸವರಾಜು ಸ್ವಾಗತಿಸಿ, ಇಕೋ ಕ್ಲಬ್ ಸಂಚಾಲಕ ಪ್ರೊಫೆÉಸರ್ ಡಿ.ಕಾರ್ತಿಕ್ ಪೂವಯ್ಯ ವಂದಿಸಿ, ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಎನ್.ಎಸ್.ಸುಜಿತ್ ನಿರೂಪಿಸಿದರು.

ಕೊಡವ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ರಾಕೇಶ್ ಪೂವಯ್ಯ, ನಿರ್ದೇಶಕರಾದÀ ಡಾ. ಪುಷ್ಪ ಕುಟ್ಟಣ್ಣ, ಎಎಸ್‍ಎಫ್‍ಕೆ ಸದಸ್ಯರು, ಕಾಲೇಜ್ ಆಫ್ ಫಾರೆಸ್ಟ್ರಿಯ ಹಿರಿಯ ಉಪನ್ಯಾಸಕರು, ತಜ್ಞರು ಉಪಸ್ಥಿತರಿದ್ದರು.